ಜಾರಿಹೋಗಿದೆ ಮನಸು
ಅನಿಸಿದೆ...
ಜಾದೂವಾಗಿದೆ ನನಗೆ.
ಮೋಡಿ ಮಾಡಿದೆ ಮಳೆಯು
ಮಂದಗಾಳಿಯ ಕಳಿಸಿ.
ಬಿಡದೆ ಕಾದಿದೆ ನೆನಪು
ಕಾರಣಿಲ್ಲದ ಹುರುಪು!!!.
ಒಂಟಿ ಬಾಳಿಗೆ ನೀನು
ಅಂಟಿ ಬರುವೆನು ಎಂದೆ.,
ಗಂಟು ಹಾಕಿದ ಮೇಲೆ
ನಂಟು ಬೆಸೆಯುವುದಂತೆ..
ಮುಗ್ದ ಜೀವಕೆ ನೀನು
ಬೆಟ್ಟದಾಸರೆಯಂತೆ..
ನಿನ್ನ ಕಷ್ಟದೊಳೆಲ್ಲ
ನನಗೂ ಪಾಲಿದೆಯಂತೆ..
ಪ್ರೀತಿ ಕಡಲಿಗೆ ನೀನು
ಭದ್ರ ಸೇತುವೆಯಂತೆ..
ಮನದ ಮುಗಿಲಲಿ ನೀನು
ನಗುವ ನೇಸರನಂತೆ ...
ಚಿಗುರೊ ಬಳ್ಳಿಲಿ
ಹೊಸದು ಮೊಗ್ಗಾದ ಹಾಗೆ,
ತಾಯ ಹೆಸರ ಕೇಳಿ
ಮಗು ಕರೆದ ಹಾಗೆ,
ಮಳೆಯ ಮೋಡವ ಕಂಡು
ನವಿಲು ಕುಣಿಯುವ ಹಾಗೆ,
ನೀರಿಲ್ಲದೆ ಮೀನು
ಚಡಪಡಿಸುವಾ ಹಾಗೆ,
ನಿನ್ನ ಒಲವಿಗೆ ಹೃದಯ
ಮಿಡಿಯುವುದು ಹೀಗೆ...!!!