Total Pageviews

Tuesday, 3 July 2012

ಸಾಗುತಿದೆ...


ಗುರಿ ಇಲ್ಲದ ಬದುಕು
ಬಯಸುವ ಮನ
ನಿಲುಕದ ಕನಸು***
ನೆನಪುಗಳ ತಡಕಾಟ
ಭಾವನೆಗಳ ಹೊಯ್ದಾಟ!
ಮುಗಿಯದ ದಾರಿ!!
ಭರವಸೆಯ ಬೆನ್ನಟ್ಟಿ ಸಾಗುತಿದೆ..


ದಾರಿಗಳು ಹಲವಾರು
ತವಕಗಳು ನೂರಾರು
ಮನದಲ್ಲಿ ದುಗುಡ!
ಕಣ್ಣಮುಚ್ಚಿ ಸಾಗುತಿದೆ,
ನೆಲೆ ಇಲ್ಲದ ಜೀವನ...


ಹಲವಾರು ಚಿಂತೆಗಳು
ಮುಗಿಯದದರ ಕಂತುಗಳು!
ನಡುಸುಳಿವ ಕವಲುಗಳು.!!
ದಿಕ್ಕೆಟ್ಟ ನಾವೆ,
ಎತ್ತಲೋ ಪಯಣ,
ಹುಚ್ಚೆದ್ದು ಸಾಗುತಿದೆ...

6 comments:

  1. ಚನ್ನಾಗಿದೆ ನವಿಲು ಗೆರೆ ...

    ReplyDelete
    Replies
    1. ಧನ್ಯವಾದ,,,ನವಿಲಗರಿ ಮರಿ ಹಾಕಿದ ಮೇಲೆ ಕೊಡ್ತೀನಿ ...:)

      Delete
    2. ಯಾವಾಗ ಹಾಕುತ್ತೆ ?

      Delete
  2. ಹಲವಾರು ಚಿಂತೆಗಳು
    ಮುಗಿಯದದರ ಕಂತುಗಳು!
    ನಡುಸುಳಿವ ಕವಲುಗಳು.!!
    ದಿಕ್ಕೆಟ್ಟ ನಾವೆ,

    ಚಂದದ ಸಾಲುಗಳು.....
    ಒಳ್ಳೆಯ ಕವಿತೆ......

    ಕವಯಿತ್ರಿಯವರಿ ಗೆ ಶುಭಾಷಯ...

    ReplyDelete
  3. ಇಷ್ಟವಾಯಿತೆಂದಷ್ಟೇ ಹೇಳಬಲ್ಲೆ...

    ReplyDelete

Thanks