Total Pageviews

Wednesday 20 June 2012

ಪ್ರೀತಿ



ಮುಗುದೆಯೊಳಗಣ ಕುಸುಮದಂತೆ 
ನನ್ನೊಡಲ ಪ್ರೀತಿ 
ಹಿಗ್ಗಿ ಬಿರಿಯಲು ತವಕ.!!

ಕಟ್ಟೊಡೆದ ಕಡಲಂತೆ 
ನನ್ನ ಹೆಮ್ಮೆಯ ಪ್ರೀತಿ
ಜಾರಿ ಸಾಗುವ ತವಕ..!!

ತೇಲಿ ಓಡುವ ಮೋಡದ ತೆರದಿ
ನನ್ನಾಸೆಯ ಪ್ರೀತಿ
ಕರಗಿ ಹನಿಯಾಗುವ ತವಕ!!

ಮಲೆನಾಡ ಮಳೆಯಂತೆ
ಈ ಜೀವದ ಪ್ರೀತಿ
ತವಕದಲಿ ಮಿಡಿಯುತಿದೆ 
ಕಟ್ಟಿಕೊಳ್ಳಲು ಬದುಕ..

Photo credit goes to ಛಾಯಾ ಚಿತ್ತಾರಾ by Prakasha Hegde

6 comments:

  1. ಹಾಂ....

    ಚನ್ದೆನಾಗಿದೆ ಕವನ......

    ಇದೆಲ್ಲವನ್ನೂ ಬದುಕಿನೊಳಗೆ ಬರುವವನ ಮೇಲೆ ಸುರಿಯಬಹುದು.......

    ಆತ ತೇಲಾಡೋದಂತೂ ನಿಜ....

    ಅಂದ್ರೆ ಅಷ್ಟು ಚನ್ನಾಗಿದೆ ಅಂತ....

    ReplyDelete
  2. wow..hats off to u Veena, awesome:)

    ReplyDelete
  3. ಆ ತವಕದ ಪ್ರೀತಿ ಗೆ ಒಂದು ನೆಲೆ ಸಿಗಲಿ ಅಂತ ನನ್ನ ಪ್ರಾರ್ಥನೆ.. ವೀಣಾ..
    ತುಂಬಾ ಚನ್ನಾಗಿದ್ದು.. ಕವನ..

    ReplyDelete
    Replies
    1. ಸಂಚಾರಿ ಮನದ ಸಂವಾದಗಳು..
      ಧನ್ಯವಾದ.

      Delete

Thanks