ನನ್ನ ಅಮ್ಮನೇ..
ಅಮ್ಮ ನಿನ್ನ ಕನಸನೊಂದ
ನನಸು ಮಾಡೋ
ಆಸೆ ನನಗೆ
ಬೆಟ್ಟದಷ್ಟು ಪ್ರೀತಿ ಕೊಟ್ಟು
ಎತ್ತಿ ನಗಿಸಿ
ತುತ್ತು ಕೊಟ್ಟೆ
ಅಳುವ ಮೊಗಕೆ ಮುತ್ತು ಕೊಟ್ಟು
ಬೆಳೆಸಿ ಜೀವ ಮಮತೆ ಇಟ್ಟೆ.
ನಿನ್ನ ಬದುಕ ಬತ್ತಿ ಮಾಡಿ
ನನ್ನ ಬದುಕು ಬೆಳಗಲೆಂದು
ಕಷ್ಟ ಕೋಟಿ
ಛಲದಿ ತಡೆದೆ
ನನ್ನ ದೈವವೇ ..
ನಿನ್ನ ಆಸೆ ಮರೆತು ಹಾಡಿ
ಕನಸು ಗುರಿಯ
ಹಸನು ಮಾಡಲೆಂದು
ದುಡಿದೆ ಮನಸು ಮಾಡಿ
ನನ್ನ ಅಮ್ಮನೇ..
Nice dear..:) ಮಕ್ಕಳಿಗೋಸ್ಕರ ತಾಯಿ ತನ್ನ ಜೀವನವನ್ನೇ ಮುಡಿಪಾಗಿಡುತಾಳೆ.....ಹೆಅಡ್ಸ್ ಆಫ್ ಟು ಮೈ ಮೊಮ್..I love u mom.
ReplyDeleteನಮ್ಮಿಂದ ಯಾವ ಪ್ರತಿಫಲ ಅಪೇಕ್ಷೆ ಇಲ್ಲದೇನೆ.. ನಮಗಾಗಿ ಬದುಕೋ ಜೀವ ಅಂದ್ರೇ ಅದು ನಮ್ಮಗಳ ತಾಯಿ. ನಿಸಂದೇಹವಾಗಿ ಹೇಳ್ತಿ ನಾವು ಎಷ್ಟೇ ಬೇಜಾರು ಅವಳಿಗೆ ಮಾಡಿದ್ರುನು. ಅವಳು ಮಾತ್ರ ನಮಗಾಗಿ ಹಗಲಿರುಳು ಕ್ಷೇಮವನ್ನೇ, ಬಯಸುವ ಜೀವ. ಅದು.. ತುಂಬಾ ಚನ್ನಾಗಿ ಬರದ್ದೆ ವೀಣಾ.. ಅಮ್ಮನ ಪ್ರೀತಿ ಗೊತ್ತಿದ್ದವಕೆಲ್ಲಾ ಈ ಕವನ ತುಂಬಾ ಇಷ್ಟ ಆಗ್ತು.. http://benakakr.blogspot.in/2011/02/blog-post.html ನಾನು ಕೂಡ ಅಮ್ಮನ ಬಗ್ಗೆ ಈ ಲಿಂಕ್ ಅಲ್ಲಿ ಬರೆಯಲೇ ಪಟ್ಟಿದ್ದೆ ಬಿಡುವು ಸಿಕ್ಕದಾಗ ಓದು.. ಹುಂ ಇಂತ ಕವನಗಳು ಇನ್ನೂ ಹೆಚ್ಚಿನ ಸಂಖ್ಯೆ ಅಲ್ಲಿ ಬರಲೆಂದು ಆಶಿಸುವೆ.
ReplyDelete