Total Pageviews

Tuesday 29 May 2012

ನೀನು..

ಮನದಲ್ಲಿ ಮೊಳೆತ 
ಮಧುರ ಮಲ್ಲಿಗೆ ನೀನು..
ಭಾವದಲಿ ಬೆರೆತ 
ಬಾನಾಡಿ ನೀನು...

ಕನಸಲ್ಲಿ ಕರೆದ 
ಕನವರಿಕೆ ನೀನು..
ಮಧುವಲ್ಲಿ ಬೆರೆತ 
ಮಕರಂಧ ನೀನು..

ಬೆಳಕಲ್ಲಿ ಬೆರೆತ 
ಬೆಳದಿಂಗಳು ನೀನು..
ಪುಸ್ತಕದಲ್ಲಿರುವ 
ಮುಖಪುಟವೆ  ನೀನು.. 

ಕವಿಗಳಲ್ಲಿಯೇ ಶ್ರೇಷ್ಟ 
ಕವಿಪುಂಗವ ನೀನು..
ನನ್ನಲ್ಲಿ ಕಲೆತ 
ನನ್ನಾಸೆ ನೀನು..

ನನ್ನ ಹೃದಯವ ಕದ್ದ
ನನ್ನೊಡೆಯ ನೀನು..
ಅಂತರಂಗದಲ್ಲಿರುವ 
ಅಂತರಾತ್ಮವೇ ನೀನು..

Thursday 24 May 2012

ಕಷ್ಟ

ಬದುಕುವುದು ಕಷ್ಟ ಬರಗಾಲದಲ್ಲಿ
ನಡೆಯುವುದು ಕಷ್ಟ ಬರಿಗಾಲಿನಲ್ಲಿ
ಬಯಸಿದರೆ ಕಷ್ಟ ಬದಲಾಗದಲ್ಲಿ
ಬರೆಯುದು ಕಷ್ಟ ಬಹುಭಾಷೆಯಲ್ಲಿ

ಅಡಗುವುದು ಕಷ್ಟ ನಡುಬೀದಿಯಲ್ಲಿ
ಅಲೆಯುವುದು ಕಷ್ಟ ಪರನಾಡಿನಲ್ಲಿ
ಮರೆಯುವುದು ಕಷ್ಟ ಮನದಾಳದಲ್ಲಿ
ಕರೆಯುವುದು ಕಷ್ಟ ಜನಜಾತ್ರೆಯಲ್ಲಿ

Thursday 10 May 2012

ಆಶಯ

ಮನದಲ್ಲಿ ಗೊಂದಲವೇಕೆ?
ಬಯಕೆಗಳ ಬಾಂದಳವೇಕೆ?
ನಗನಾಣ್ಯದ ಹಂಬಲವೇಕೆ?
ಪ್ರಕ್ರತಿಯ ಸೊಭಗಿರಲು,
ಕಲ್ಪನೆಯ ಕಣ್ಣಿರಲು,
ಕನಸಿನ ಸಾಮ್ರಾಜ್ಯಕ್ಕೆ ಬೇರೆ
ಗೋಪುರ ಕಟ್ಟಬೇಕೆ?
ಸಣ್ಣ-ದೊಡ್ಡವ ಎಂಬ ಬೇಧವೇಕೆ?
ತುಚ್ಛ ಬೇಧದ ಭಾವವೇಕೆ??
ಕಟ್ಟಿದ ಕಾರ್ಮುಗಿಲು ದೂರಸರಿದಾಗ
ದುರಾಸೆಯ ಪಟ್ಟ ಕೊರಗೇಕೆ??
ಮನಪಕ್ಷಿಯ ಹಾರಿಬಿಡು;
ನೀಲಾಕಾಶದಲಿ ಕುಣಿಯುತಿರಲಿ.
ಕರುಣರಸ ಕಾರಂಜಿಯಂತೆ ಚಿಮ್ಮಿಬರಲಿ.
ಇದು ಹೊಸಬಾಳಿಗೆ,
ಹೊಸನಾಳೆಗೆ,
ಶುಭನಾಂಧಿಯ ಹಾಡುತಿರಲಿ...

Tuesday 8 May 2012

ತವಕ

ನನ್ನೊಳಗೆ ತವಕ 
ಒಳಗೊಳಗೆ ನಡುಕ 
ಹುರುಳಿಲ್ಲದ ಹುನ್ನಾರ 
ಅವಿತಿಹುದು ಒಳಗೆ!!.

ಹುಚ್ಚು ಬೆಚ್ಚನೆ ಕನಸು
ಹೆಚ್ಚಿ ಹರಿಯುವ ವಯಸು
ಹುಚ್ಚು ಕೋಡಿಯ ಮನಸು 
ಬಯಸಿ ಕಾಯುತಲಿಹುದು..!!

ಬಗೆಹರಿಯದಾ.. ಕಲಹ 
ಬಲಿಯಿರಲು ನೀ ಸನಿಹ 
ಮೌನದೊಳಗಿನ ಮಾತಿಗೆ 
ದನಿಯಿಲ್ಲವೆಕೆ???