Total Pageviews

Tuesday, 29 May 2012

ನೀನು..

ಮನದಲ್ಲಿ ಮೊಳೆತ 
ಮಧುರ ಮಲ್ಲಿಗೆ ನೀನು..
ಭಾವದಲಿ ಬೆರೆತ 
ಬಾನಾಡಿ ನೀನು...

ಕನಸಲ್ಲಿ ಕರೆದ 
ಕನವರಿಕೆ ನೀನು..
ಮಧುವಲ್ಲಿ ಬೆರೆತ 
ಮಕರಂಧ ನೀನು..

ಬೆಳಕಲ್ಲಿ ಬೆರೆತ 
ಬೆಳದಿಂಗಳು ನೀನು..
ಪುಸ್ತಕದಲ್ಲಿರುವ 
ಮುಖಪುಟವೆ  ನೀನು.. 

ಕವಿಗಳಲ್ಲಿಯೇ ಶ್ರೇಷ್ಟ 
ಕವಿಪುಂಗವ ನೀನು..
ನನ್ನಲ್ಲಿ ಕಲೆತ 
ನನ್ನಾಸೆ ನೀನು..

ನನ್ನ ಹೃದಯವ ಕದ್ದ
ನನ್ನೊಡೆಯ ನೀನು..
ಅಂತರಂಗದಲ್ಲಿರುವ 
ಅಂತರಾತ್ಮವೇ ನೀನು..

Thursday, 24 May 2012

ಕಷ್ಟ

ಬದುಕುವುದು ಕಷ್ಟ ಬರಗಾಲದಲ್ಲಿ
ನಡೆಯುವುದು ಕಷ್ಟ ಬರಿಗಾಲಿನಲ್ಲಿ
ಬಯಸಿದರೆ ಕಷ್ಟ ಬದಲಾಗದಲ್ಲಿ
ಬರೆಯುದು ಕಷ್ಟ ಬಹುಭಾಷೆಯಲ್ಲಿ

ಅಡಗುವುದು ಕಷ್ಟ ನಡುಬೀದಿಯಲ್ಲಿ
ಅಲೆಯುವುದು ಕಷ್ಟ ಪರನಾಡಿನಲ್ಲಿ
ಮರೆಯುವುದು ಕಷ್ಟ ಮನದಾಳದಲ್ಲಿ
ಕರೆಯುವುದು ಕಷ್ಟ ಜನಜಾತ್ರೆಯಲ್ಲಿ

Thursday, 10 May 2012

ಆಶಯ

ಮನದಲ್ಲಿ ಗೊಂದಲವೇಕೆ?
ಬಯಕೆಗಳ ಬಾಂದಳವೇಕೆ?
ನಗನಾಣ್ಯದ ಹಂಬಲವೇಕೆ?
ಪ್ರಕ್ರತಿಯ ಸೊಭಗಿರಲು,
ಕಲ್ಪನೆಯ ಕಣ್ಣಿರಲು,
ಕನಸಿನ ಸಾಮ್ರಾಜ್ಯಕ್ಕೆ ಬೇರೆ
ಗೋಪುರ ಕಟ್ಟಬೇಕೆ?
ಸಣ್ಣ-ದೊಡ್ಡವ ಎಂಬ ಬೇಧವೇಕೆ?
ತುಚ್ಛ ಬೇಧದ ಭಾವವೇಕೆ??
ಕಟ್ಟಿದ ಕಾರ್ಮುಗಿಲು ದೂರಸರಿದಾಗ
ದುರಾಸೆಯ ಪಟ್ಟ ಕೊರಗೇಕೆ??
ಮನಪಕ್ಷಿಯ ಹಾರಿಬಿಡು;
ನೀಲಾಕಾಶದಲಿ ಕುಣಿಯುತಿರಲಿ.
ಕರುಣರಸ ಕಾರಂಜಿಯಂತೆ ಚಿಮ್ಮಿಬರಲಿ.
ಇದು ಹೊಸಬಾಳಿಗೆ,
ಹೊಸನಾಳೆಗೆ,
ಶುಭನಾಂಧಿಯ ಹಾಡುತಿರಲಿ...

Tuesday, 8 May 2012

ತವಕ

ನನ್ನೊಳಗೆ ತವಕ 
ಒಳಗೊಳಗೆ ನಡುಕ 
ಹುರುಳಿಲ್ಲದ ಹುನ್ನಾರ 
ಅವಿತಿಹುದು ಒಳಗೆ!!.

ಹುಚ್ಚು ಬೆಚ್ಚನೆ ಕನಸು
ಹೆಚ್ಚಿ ಹರಿಯುವ ವಯಸು
ಹುಚ್ಚು ಕೋಡಿಯ ಮನಸು 
ಬಯಸಿ ಕಾಯುತಲಿಹುದು..!!

ಬಗೆಹರಿಯದಾ.. ಕಲಹ 
ಬಲಿಯಿರಲು ನೀ ಸನಿಹ 
ಮೌನದೊಳಗಿನ ಮಾತಿಗೆ 
ದನಿಯಿಲ್ಲವೆಕೆ???

Wednesday, 25 April 2012

ಸ್ನೇಹ


ಯಾವ ಜನುಮದ ನಂಟೋ ಏನೋ 
ನಿನ್ನ ಸ್ನೇಹವ ಪಡೆದಿಹೆ
ಎಲ್ಲಿಯದೋ ಸಂಬಂಧವೇನೋ 
ನನ್ನ ನಿನ್ನೆದೆ ಸೆಳೆದಿದೆ

ನಿನ್ನ ಸ್ನೇಹದ ಮೂರ್ತಿ ಕೆತ್ತಿದೆ
ನಿನ್ನ ನಗುವಿನ ಬೆಳಕ ಹಚ್ಚಿದೆ
ನಿನ್ನ ಸ್ನೇಹದ ಹೊಳಪ ಮೆಚ್ಚಿದೆ
ನಿನ್ನ ಭಾವಕೆ ಮನವು ಬಾಗಿದೆ

ಹಸೀನಾ, ನಿನ್ನ ಹೆಸರದು
ಅದುವೇ ಅದ್ಭುತ
ನಿನ್ನ ಒಲವಿಗೆ ನಾನು ಭಾವುಕ 
ಮಧುರ ಸ್ನೇಹದಿ ಕೈಯ್ಯ ಚಾಚುತ
ಹೇಳುತಿದೆ ಈ ವೀಣಾ Haseena I Miss U...
I wish to dedicate this poem to my friend Haseena. I am very very happy to have such a great friend.

Thursday, 19 April 2012

ಬರುವೆಯಾ ಒಮ್ಮೆ


ಕನಸಲ್ಲಿ ಕರೆದೆ 
ಕನವರಿಕೆ ನಿನದೆ 
ಕಣ್ಣಲ್ಲಿ ಕರೆಯೊಮ್ಮೆ
ಮನಸೋತು ಗೆಳೆಯ..

ಕಂಡರಿಯದ ದಾರಿಯಲಿ 
ಬರಸೆಳೆದು ನಡೆ ಮುಂದೆ.
ನನ್ನೊಲವಿನ ನಡುವೆ 
ನಿನ್ನೊಮ್ಮೆ ಮರೆ ನೀನು ..

ಬರುವೆಯಾ.? ಗೆಳೆಯ..
ಮಬ್ಬು ಕತ್ತಲೆಯೊಳಗೆ 
ಬಿದಿಗೆ ಚಂದ್ರಮನಂತೆ.
ಮುಸ್ಸಂಜೆಯಲಿ ಕಾವೇರಿಯ 
ರವಿಕಿರಣ ಚುಂಬಿಸುವಂತೆ..

Thursday, 15 March 2012

ನೆಪ..

ನೆಪದಲ್ಲಿ ಬಂದ 
ಸಂಬಂಧದ ಸಂಕೋಲೆ
ಬಿಡಿಸಲಾರದ ಕಗ್ಗಂಟು..
ಅಳೆದಷ್ಟು ಅಗಲ
ಬಗೆದಷ್ಟು ಬಹಳ
ಸ್ನೇಹದ ಆಸರೆಯು 
ಪ್ರೀತಿಯ ಸಿಂಚನವು 
ನಗುವಿನ ಅರಳುಮಲ್ಲೆ
ಹರಡಿರಲು ಮೆಲ್ಲಗೆ 
ನನ್ನಲ್ಲಿ ಚೇತನ
ದಿನದಿನವೂ ನೂತನ
ಹೀಗಿರಲು ಜೀವನ..
ನನ ಬದುಕು ಪಾವನ...