ಮೌನವೀಣೆ
ಭಾವತಂತಿ ಮೀಟಿದಾಗ ಜೀವನಾಡಿ ಹಾಡಿದೆ..
Total Pageviews
Thursday, 15 March 2012
ನೆಪ..
ನೆಪದಲ್ಲಿ ಬಂದ
ಸಂಬಂಧದ
ಸಂಕೋಲೆ
ಬಿಡಿಸಲಾರದ ಕಗ್ಗಂಟು..
ಅಳೆದಷ್ಟು
ಅಗಲ
ಬಗೆದಷ್ಟು ಬಹಳ
ಸ್ನೇಹದ ಆಸರೆಯು
ಪ್ರೀತಿಯ ಸಿಂಚನವು
ನಗುವಿನ ಅರಳುಮಲ್ಲೆ
ಹರಡಿರಲು ಮೆಲ್ಲಗೆ
ನನ್ನಲ್ಲಿ
ಚೇತನ
ದಿನದಿನವೂ
ನೂತನ
ಹೀಗಿರಲು ಜೀವನ..
ನನ ಬದುಕು ಪಾವನ...
Wednesday, 29 February 2012
ನೆನಪು
ಎಂದೋ
ಮರೆತ ಹಾಡು
ಗುನುಗುನಿಸುತಿದೆ ಇಂದು
ಏನಿದರ ರಹಸ್ಯ
ಅರಿಯಲಾರದೆ ಹೋದೆ
ತಡಕಾಡಿದೆ ಮನವ
ಮಿಡುಕುತಿದೆ ಸಂದೇಹ
ಮಸುಕು ಬೆಳಕಲಿ
ಜನರು ನಡೆಯುವಂತೆ .
ಇಹುದೊಂದು ಸತ್ಯ
ಒಪ್ಪಲೂ ಮನಸ್ಸಿಲ್ಲ
ಹೃದಯನಾಡಿಯ ಮಾತು
ಒದರಿದಂತೆ..
Friday, 17 February 2012
Hello
Hearty Welcome to my blog....
Newer Posts
Home
Subscribe to:
Posts (Atom)