Total Pageviews

Tuesday 5 June 2012

ಹಂಬಲ





ಇಳಿಸಂಜೆ ಕಳೆವಾಗ
ಮಳೆಯಲ್ಲಿ ನೆನೆದಾಗ
ನೀ ದೂರ ಇರುವಾಗ
ಹೇಗೆ ಕಳೆಯಲಿ ಸಮಯ.. 
ನಿನ ನೆನಪು ಬಂದಾಗ ?

ಕಲ್ಪನೆಯ ಕಾವ್ಯಗಳು
ಮನತುಂಬಿ ನಿಂತಾಗ
ನವಭಾವ ತುಂಬಿತುಂಬಿ..
ಮನಹಾಡಿದಾಗ..
ಈ ಜೀವ ನಿನ ಸನಿಹ 
ಹಂಬಲಿಸಿದಾಗ..
ಹೇಗೆ ಸಹಿಸಲಿ ವಿರಹ
ನೀನಿಲ್ಲದಾಗ ???

ನೆನಪಲ್ಲಿ ನನ್ನ ಹೃದಯ 
ಬಿಕ್ಕಳಿಸಿದಾಗ
ಬರುವೆನೆಂದರು ಬರದೆ 
ನೀ ಕಾಡಿದಾಗ..
ನೀ ಕೊಟ್ಟ ನವಿಲುಗರಿ
ಮರಿ ಹಾಕಿದಾಗ
ಹೇಗೆ ತೋರಲಿ ಗೆಳೆಯ
ನೀನಿಲ್ಲದಾಗ... 

18 comments:

  1. wow..very nice:)

    ReplyDelete
  2. very beautiful lines .....
    "Ni" refers to friend or lover

    ReplyDelete
  3. Beautiful Lyric. ತುಂಬ ಚೊಲೊದಾಯ್ದು. ವಿರಹದಲಿ ಒಳ್ಳೆ ಭಾವನೆ ಪ್ರಿಯಕನ ಬಗ್ಗೆ ಹೊರಬಂದು.

    ReplyDelete
  4. ಕಲ್ಪನೆಯ ಕಾವ್ಯಗಳು
    ಮನತುಂಬಿ ನಿಂತಾಗ
    ನವಭಾವ ತುಂಬಿತುಂಬಿ..
    ಮನಹಾಡಿದಾಗ..
    ಈ ಜೀವ ನಿನ ಸನಿಹ
    ಹಂಬಲಿಸಿದಾಗ..
    ಹೇಗೆ ಸಹಿಸಲಿ ವಿರಹ
    ನೀನಿಲ್ಲದಾಗ ?

    xcellent .....

    ಮಾತೇ ಇಲ್ಲೆ.... ರಾಶಿ ಚೊಲೋ ಬರೀದೆ....

    "ನವಭಾವ ತುಂಬಿತುಂಬಿ.." ಇಲ್ಲಿ ಒಂದು ಸಲ ಮಾತ್ರ
    "ತುಂಬಿ" ಬಂದರೆ ಹೇಳುಬ ಭಾವಕ್ಕೆ ಸರಿ ಕೂಡ್ತನಾ ಅಂತ ಅನಿಸಿಕೆ.....

    ಸಾಲುಗಳು ಮಾತ್ರ ಅದ್ಭುತ..
    ನಿನ್ ಇನಿಯ ಓದಿದ್ರೆ ಓಡಿ ಬಂದ್ಬಿಡ್ತಾ.... ಎಲ್ಲಿದ್ರೂ....

    ReplyDelete
    Replies
    1. ಧನ್ಯವಾದಗಳು ರಾಗಣ್ಣ..

      ಈ ಕವನದಲ್ಲಿ ತುಂಬಿತುಂಬಿನೆ ಸರಿ ಅನ್ಸಿದ್ದು.. ಭಾವನೆ ತುಂಬಿ ಹರಿತಿದ್ದು ಹೇಳೋ ಆಶಯ ನಂದು..

      Delete
  5. Superrrrrrr... olle kavana.,, prasagalella chandavagi ponisidde.. nice....

    ReplyDelete
  6. ಚೆನ್ನಾಗಿದ್ದೆ...

    ಭಾವಾಂತರಂಗದಲ್ಲಿ ಭಾವ ಲಹರಿ ಮುಂದುವರೆಯಲಿ...

    ReplyDelete
  7. ವೀಣಾ...

    ಬಹಳ ಸುಂದರ ಸಾಲುಗಳು...

    ಇಷ್ಟವಾಯ್ತು... ಬರೆಯುತ್ತಿರಿ...

    ಪ್ರಕಾಶಣ್ಣ...

    ReplyDelete
  8. ಧನ್ಯವಾದ ಪ್ರಕಾಶಣ್ಣ ...

    ReplyDelete

Thanks