Total Pageviews

Wednesday, 26 December 2012

ಅನಿಸುತಿದೆ..

ಇಬ್ಬನಿಯಲಿ ನಾ ತೊಯ್ದು 
ನನ್ನ ಹೃದಯ ಮೃದುವಾಯ್ತು 
ನಿನ್ನ ನೆನಪಿನ ಗರಿಕೆ 
ಕ್ಷಣದಲ್ಲೇ ಹಸಿರಾಯ್ತು 
ನನ್ನೊಡಲಿನ  ಪ್ರೀತಿ 
ಮೊಗ್ಗರಳಿ ಹೂವಾಯ್ತು 
ಇಂತಿರಲು ನಾ ಕಂಡದ್ದು 
ಕನಸೆಂದು ನೋವಾಯ್ತು..

ಬೆಳದಿಂಗಳ ರಾತ್ರಿಯಲಿ 
ನಗುಮೊಗದ ಸರದಾರ 
ಬಾನ  ಚಂದ್ರನು ತಾನು 
ರೋಹಿಣಿ ಬಳಗವ ಕೂಡಿ 
ಮಧುಚಂದ್ರಕೆ ಹೊರಟಂತೆ 
ನೀ ಜೊತೆಗೆ ಇರದಿರಲು 
ನನ್ನ ನೋಡಿ ನಕ್ಕಂತೆ 
ಮೌನ ಗೌರಿಯ ಹಾಗೆ 
ನಾನೊಂಟಿ  ವನದಲ್ಲಿ.

ಅಲೆವ ಮನದೊಳಗಿಂದು 
ಜಿಗಿವ ಆಸೆಯ ಕಂತೆ 
ಸೋತ ಕಂಗಳವಳಗೆ
ನೂರು ಮಾತಿರುವಂತೆ 
ನೀನು ಎಲ್ಲಿಹೆಯೆಂದು 
ಮನವ ಕಾಡಿದೆ ಚಿಂತೆ
ಜೀವ ನಿನ್ನಾಸರೆಯ  
ಕಾಯುತಿಹುದು .....
            -- ಮೌನ ವೀಣೆ

8 comments:

  1. ಕಾಯುತಿರುವ ಜೀವದಾಸರೆಯ ತಂಪು ಸಿಗಲಿ...

    ಸೊಗಸಾಗಿದೆ ಬರಹ...

    ReplyDelete
  2. ಅತ್ಯುತ್ತಮವಾದ ಬರಹ...

    ReplyDelete
  3. ಚಂದದ ಭಾವ ಬರಹ...
    ಇಷ್ಟವಾಯಿತು...

    ReplyDelete
  4. ಮೌನವೀಣೆ ಮಿಡಿದ ಪರಿ ಸೊಗಸಾಗಿದೆ

    ReplyDelete

Thanks