ಆಹಾ!! ಒಂದ್ ಚೊಲೊ ಗಾಳಿ ಬಂತ್ ಜೀವ ಬಂದಂಗ್ ಆಯ್ತಪ್ಪಾ... ಹೂಂ... ಸುಡು ಬೇಸಿಗೆಯ ಝಳ ಶುರುವಾಗುತ್ತಿದೆ. ಊಫ್.. ಊಸ್.. ಅಂತ ಕೈಲೊಮ್ಮೆ, ಸೆರಗಲ್ಲೊಮ್ಮೆ, ಕರ್ಚಿಪಲ್ಲೊಮ್ಮೆ, ಕೈಗೆ ಸಿಕ್ಕ invitations, ರಟ್ಟು-ಪೇಪರಗಳಲ್ಲೊಮ್ಮೆ ಗಾಳಿ ಬೀಸಿಕೊಳ್ಳುತ್ತ.. ವಾತಾವರಣದಲ್ಲಿ ಒಂಚೂರು ತಂಪಿಲ್ಲ ಕಣ್ರೀ.. ಈ KEB ಅವ್ರು ಎಲ್ಲಿ ಹಾಳಾಗಿ ಹೋದ್ರೋ ಏನೋ!!! ಪ್ಯಾನ್ ಹಚ್ಕೊಂಡು ಕುರೋಣ ಅಂದ್ರೆ ಕರೆಂಟ್ ತೆಕ್ಕೊಂಡು ಕಾಡ್ತಾರೆ. ನಮ್ಮ ಮಗಂದು/ಮಗಳಿಂದು exam ನಡೀತಿದೆ. ಪಾಪದ ಕೂಸು ಓದ್ಕೊಬೇಕ್ ಸುಸ್ತ್ ಆಗುತ್ತೆ ಅದಿಕ್ಕೆ ಮೇಲಿಂದ ಲೈಟ್ ಬೇರೆ ತೆಗಿತಾರೆ.. ಹೀಗೆ ಸಾಮಾನ್ಯವಾಗಿ ಸುತ್ತ-ಮುತ್ತ ಕೇಳಿಬರೋ ಮಾತುಗಳು. ಜೊತೆಗೆ ಒಂದಷ್ಟು simpaty. ಬಿಸಿಲಿನ ಬೇಗೆಗೆ ಒಂದ್ ಸ್ವಲ್ಪ ಮೈಬಿಸಿ, exam ಬರ್ಯೊ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಬಿಸಿ, ರಾಜಕೀಯದವರಿಗೆ ಚುನಾವಣೆಯ ಬಿಸಿ, ಒಂದ್ ಹಂತ ಪರೀಕ್ಷೆ ಮುಗಿಸಿಕೊಂಡೋರ್ಗೆ ಟ್ಯೂಶನ್ ಕ್ಲಾಸ್, ಸಮ್ಮರ್ ಕ್ಯಾಂಪಗಳ ಬ್ಯುಸಿ scheduleಗಳ ಬಿಸಿ, ಇನ್ನು work ಮಾಡೋರಿಗೆ ಕೆಲಸದ ಒತ್ತಡದ ಬಿಸಿ ಜೊತೆಗೆ ಮಾರ್ಚ್ end ಮುಗಿತು ಈ ಏಪ್ರಿಲ್ ನಲ್ಲಿ hike ಮಾಡ್ತಾರೋ ಏನೋ ಎಂಬ ಒಂದಸ್ವಲ್ಪ ತಲೆಬಿಸಿ, ಹೀಗೆ ಅದೂ ಇದು ಅಂತ ವಾತಾವರಣ fulllll ಬಿಸಿ ಕಣ್ರೀ.. ಒಟ್ನಲ್ಲಿ ಬಿಸಿ start up. Anyway ಈ ಬೇಸಿಗೆಯನ್ನು late ಆದ್ರೂ latest ಆಗಿ ಸ್ವಾಗತಿಸೋಣ..
ಸೆಕೆ ದಿನಗಳ ತಾಪ
ಭರಿಸುತಿದೆ ತೀರದ ಬಾಯಾರಿಕೆಯ
ಆಸೆಪಟ್ಟು ಜೀವ ಬೇಡುತಿದೆ
ತರಾವರಿಯ ಮಿಲ್ಕ್ ಶೇಕುಗಳ
ಗಂಟೆಗೊಮ್ಮೆ ...
ತರಿಸುತಿದೆ ಪ್ಯಾನಿನ ಬಿಸಿಗಾಳಿ
slice maazaಗಳ ನೆನಪ
ಸ್ವಾಗತಿಸುವ ಬೇಸಿಗೆಯ
cold ಕಾಫಿ ಕುಡಿಯುತ್ತ..
Happy Summar...
--ಮೌನ ವೀಣೆ
ಚಿತ್ರಕ್ರಪೆ - ಅಂತರ್ಜಾಲ
Summer ತುಂಬಾ colorful ಆಗಿದೆ
ReplyDeleteನಿಜ ಉಷಾಅವರೇ.. ಸದ್ಯ ಬರಿತಿದೆಯಲ್ಲವೇ ಹೊಸಯುಗಾದಿ..
Deleteಹೊಸ ವರ್ಷದ ಆರಂಭಕ್ಕೆ,
ನವೋಲ್ಲಾಸ ತುಂಬಿದ ಬಣ್ಣದ ಹೋಳಿ ಸದ್ಯ ಕಳೆದುದಕ್ಕೆ ಬೇಸಿಗೆಯ ಬೆವರಲ್ಲಿ ಬೆರೆತರೂ ಬಣ್ಣ ಇನ್ನು ಮಾಸಿಲ್ಲ.
ಅದಕ್ಕಾಗಿಯೇ ಈ summer ಸಕತ್ colorful... :)
"ಚಿಮ್ಮುತಿರಲಿ ಚೇತನ" ಧನ್ಯವಾದ..
ಯುಗಾದಿಯ ಶುಭಾಶಯಗಳು ಮೇಡಂ..
ReplyDeleteಮಿಲ್ಕ್ ಶೇಕ್ ನ ಫೋಟೋಗಳೇ ತಂಪು ತರಿಸುತ್ತಿದೆ.. :)
ಹ್ಯಾಪಿ ಸಮ್ಮರ್ ನಿಮಗೂ ಸಹ.. :)
ಬಲು ತ್ರಾಸುರೀ ಈ ಬೇಸಿಗೆ. ಬೇಸಿಗೆಯ ಈ ಬರಹ ತುಂಬಾ ಚೆನ್ನಾಗಿ 'ಲಘು ಪ್ರಬಂಧ'ದ ಮಾದರಿಯಲ್ಲಿ ಮೂಡಿಬಂದಿದೆ.
ReplyDeletehttp://www.badari-poems.blogspot.in/