ಬೆಳ್ಳಿ ಹಿಮದೆದೆಯಲ್ಲಿ
ಬೆಚ್ಚಗಿನ ಪಾದವು ಸೋಕಲು
ಅಚ್ಚಾಯಿತು ಹೆಜ್ಜೆಯ ಗುರುತು
ಮೆಚ್ಚುಗೆಯ ಒಪ್ಪಿಗೆಯಂತೆ.
ಕುಡುಗುಡುವ ಚಳಿಗಾಳಿಯಲಿ
ಹೆಪ್ಪುಗಟ್ಟಿದ ಹಿಮಗಡ್ಡೆಗಳು
ಸಕ್ಕರೆಯ ಮಳೆಯಂತೆ
ಮುತ್ತಂತೆ ಬುವಿಗಿಳಿಯಲು
ಸ್ವರ್ಗ ಅನಿಸಿತು ಧರೆಯು
ದಂಗಾದೆ ಕ್ಷಣದಲ್ಲಿ!!
ಎನಿತು ಸೊಭಗಿನ ಧರಣಿ
ಎಲ್ಲಿ ನೋಡಿದರಲ್ಲಿ ತುಂಬಿ-
ತುಳುಕಿದಂತಿದೆ ಬಿಳಿಮಣಿ
ಮುಂದೆ ಸಾಗವ ಮನಸಲಿ
ಇನ್ನಷ್ಟು ಮತ್ತಷ್ಟು...
ಬೆರಗುಗಳ ತುಡಿತಗಳು!!?
ಇನ್ನಷ್ಟು ಮುನ್ನಡೆವೆ
ಕಣ್ತುಂಬಿ ಮನತುಂಬಿ
ಸಂತಸದಿ ಕುಣಿದು
ಭೂರಮೆಗೆ ಮಣಿದು
ಆನಂದದಿ ನಾ ಹೇಳ್ವೆ
ನಾ ಮುಂದೆ ಬರುವೆ; ನನ್ನೊಳಗೆ ನಲಿವೆ
ಈ ಜಗವ ಮರೆವೆ..
ಇನ್ನೂ ಅನಿಸುತಿದೆ..
-- ಮೌನ ವೀಣೆ
...............
ಮಯೂರ ಚಿತ್ರ ಕವನ ಸ್ಪರ್ಧೆಗಾಗಿ ಬರೆದದ್ದು, ಈ ತಿಂಗಳ ಮಯೂರ ಪತ್ರಿಕೆ ಪರೀಕ್ಷಿಸಲಿಲ್ಲ. ಪ್ರಶಸ್ತಿ ಗೆದ್ದಿಲ್ಲ ಅನಿಸತ್ತೆ. ಬಹುಮಾನ ಗೆದ್ದರೆ ಕಳಿಸುತ್ತಿದ್ದರು ಅಲ್ಲವೇ ? :-) ಆದರೆ ನನ್ನ ಬ್ಲಾಗಿನ ಬಂಧುಗಳಿಗಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದೇನೆ. ಇದು ನಮ್ಮ ಪ್ರಕಾಶಣ್ಣನವರ ಚಿತ್ರ. ಅವರ ಅದ್ಭುತ ಚಿತ್ರ ಹವ್ಯಾಸಕ್ಕೆ ನನ್ನಕಡೆಯಿಂದ ಜೈ ಹೋ ಧನ್ಯವಾದ.
ವೀಣಾ ಪುಟ್ಟಮ್ಮ..
ReplyDeleteಈ ಫೋಟೊ ತೆಗೆಯುವಾಗ "ಒಂಟಿ ತನದ" ಭಾವ ನನ್ನಲ್ಲಿ ಮೂಡಿತ್ತು...
ಹಾಗಾಗಿ ಈ ಚಿತ್ರಕ್ಕೆ "ಲೋನ್ಲಿ ವಾಕ್" "ಒಂಟಿ ಪಯಣ" ಅಂತ ಹೆಸರು ಇಟ್ಟಿದ್ದೆ..
ಈ ಫೋಟೊ..
ಎರಡು ಅಂತರರಾಷ್ಟ್ರೀಯ ಫೋಟೊ ಸ್ಪರ್ಧೆಯಲ್ಲಿ ಪ್ರದರ್ಶನಕ್ಕೆ ಸ್ವೀಕಾರವಾಗಿದೆ...
ನಾನು ಬಹಳ ಸಂಭ್ರಮ ಪಟ್ಟಿದ್ದೆ..
ಈ ಫೋಟೊ ನಿಮ್ಮ ಎಷ್ಟೆಲ್ಲ ಸಂತಸದ ಭಾವಗಳನ್ನು ಹೊರಹಾಕಿದೆ..
ಬಹಳ ಖುಷಿ ಆಯ್ತು..
ಬಹಳ ಚಂದದ ಕವನ..
ಅಭಿನಂದನೆಗಳು ಚಂದದ ಕವನಕ್ಕೆ...
ಧನ್ಯವಾದ
DeleteThis comment has been removed by the author.
ReplyDeleteಮೊದಲ ಓದಿಗೇ
ReplyDelete"ಸಕ್ಕರೆಯ ಮಳೆಯಂತೆ
ಮುತ್ತಂತೆ ಬುವಿಗಿಳಿಯಲು"
ಕವನ ಮನಸ್ಸಿಗೆ ಇಳಿದದ್ದು ಹೀಗೆ...
ಮಯೂರದಲ್ಲಿ ಪ್ರಕಟವಾದರೂ ಚಿಂತೆ ಇಲ್ಲ, ಎಲ್ಲ ಪತ್ರಿಕೆಗಳಲ್ಲೂ ನಿಮ್ಮ ಕವನಗಳೇ ರಾರಾಜಿಸುವ ಕಾಲವಂತೂ ದೂರದಲ್ಲಿಲ್ಲ.
ಒಳ್ಳೆಯ ಕಾವ್ಯಾತ್ಮಕ ರಚನೆ.
ಇನ್ನು ಈಗ ಫೋಟೋ ವಿಚಾರಕ್ಕೆ ಬಂದರೆ: ಅತಿಯಾದ ಬೆಳಕಿನ ಮೂಲವಿದ್ದರೂ ಅದನ್ನು ಸರಿಯಾಗಿ ನಿಯಂತ್ರಿಸಿ, ಹಿಮದ ನಡುವೆ ಕೆಂಪು ವಸ್ತ್ರವನ್ನು ದಾಖಲಿಸಿದ ಪ್ರಕಾಶಣ್ಣನ ಪ್ರತಿಭೆಗೆ ಶರಣು.
http://badari-poems.blogspot.in
ಧನ್ಯವಾದ
Deleteವಾವ್...ತುಂಬಾ ಚೆಂದದ ಕವನ...
ReplyDeleteಆ ಬಿಳಿಯ ಹಿಮವನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದೀರಿ ಮೇಡಮ್....ಇಷ್ಟವಾಯ್ತು...
ಇನ್ನು "ಸಕ್ಕರೆಯ ಮಳೆಯಂತೆ" ಎನ್ನುವ ಸಾಲುಗಳು ಹುಚ್ಚುಹಿಡಿಸುತ್ತಿವೆ ನನಗೆ :)..
ಕೊನೆಯಲ್ಲಿನ ಸಾಳುಗಳೂ ಇಷ್ಟವಾಯ್ತು...ಇನ್ನಷ್ಟು ಮುಂದೆ ಬರುವೆ,ಜಗವನ್ನು ಮರೆವೆ ಎನ್ನುವ ಸಾಲುಗಳು...ಬಾಲ್ಯದ ಪ್ರಪಂಚವೇ ಹಾಗೆ ಅಲ್ವಾ????
ಅಹ್ ಗೊತ್ತಿಲ್ಲ ಸರಿಯೋ ತಪ್ಪೋ ಅಂತಾ ಇದು ನನ್ನ ವೈಯಕ್ತಿಕ ಅಭಿಪ್ರಾಯ ...
ನನಗೆ ಅಲ್ಲಿ ಎರಡನೇ ಪ್ಯಾರಾದಲ್ಲಿ ದಂಗಾದೆ ಎನ್ನುವ ಪದ ಇಷ್ಟವಾಗಲಿಲ್ಲ...
ಗಾಬರಿಯಾದೆ,ಆಶ್ಚರ್ಯಗೊಂಡೆ ಎಂಬ ಭಾವ ಸರಿ ಎನಿಸಿದರೂ,ದಂಗು ಯಾಕೋ ನನಗೆ ಸರಿ ಕಾಣಲಿಲ್ಲ...ಬೇರೆ ಇನ್ನೇನಾದರೂ ಚಂದದ ಶಬ್ಧಸಿಗಬಹುದಿತ್ತೇನೋ..ನೋಡಿ...ಗೊತ್ತಿಲ್ಲ..ನನಗನಿಸಿದ್ದು ಅದು...
ಮತ್ತೆ ಅಲ್ಲಿ "ಸೊಭಗು" ಅಂತಾ ಇದೆ,ಅದು ಸೊಬಗು ನಾ???
ಜೊತೆಗೆ ಸಾಗವ ಅಂತಾ ಇದ್ಯಲ್ಲಾ ಅದ್ಕೇನಾದ್ರೂ ಬೇರೆ ಅರ್ಥ ಇದ್ಯಾ ಅಥ್ವಾ ನಮಗೆಲ್ಲ ಗೊತ್ತಿರುವ ಸಾಗುವ ಎನ್ನುವ ಪದವಾ ಅದು???ಗೊತ್ತಿಲ್ಲ...ಒಂದ್ಚೂರು ನೋಡಿ ಆಯ್ತಾ??
ಬೆಳಬೆಳಿಗ್ಗೆಯೇ ಒಂದು ಸುಂದರ ಕವನವನ್ನು ಓದಿಸಿದ್ದೀರಿ...ಪ್ರಕಾಶಣ್ಣನ ಚಿತ್ರವನ್ನು ಫೇಸ್ಬುಕ್ಕಿನಲ್ಲಿ ನೋಡಿದ್ದೆ..ಬರೆಯಲಾಗಲಿಲ್ಲ..ಇರ್ಲಿ ನೀವು ಅದನ್ನು ಪೂರೈಸಿದಿರಿ...ಚಂದದ ಸಾಲುಗಳನ್ನು ಓದಿದ ಖುಷಿ ಎನ್ನದು..
ವಂದನೆಗಳು ನಿಮಗೆ...
ಕವನವನ್ನು ತೆಗೆದುಕೊಂಡು ಹೋಗುವ ಶೈಲಿ ನಮ್ಮಂಥಹ ಎಳಸುಗಳಿಗೂ ಮಾದರಿಯಾಗಲಿ...
ನಮಸ್ತೆ :)
ಧನ್ಯವಾದ
Delete'ಅಚ್ಚಾಯಿತು ಹೆಜ್ಜೆಯ ಗುರುತು
ReplyDeleteಮೆಚ್ಚುಗೆಯ ಒಪ್ಪಿಗೆಯಂತೆ' - ಮಧುರ ಕವಿತೆ..
ಧನ್ಯವಾದ
Deleteವೀಣಕ್ಕ ಹ್ಯಾಟ್ಸ್ ಆಫ್ ..!!!! ಎಷ್ಟು ಚಂದ ಇದ್ದು...
ReplyDeleteಫೋಟೋ ನೂ ಕೂಡ ... ಪ್ರಕಾಶಣ್ಣ ಯಾವತ್ತಿನಂತೆ ಸೂಪರ್ ..:)
ಇಷ್ಟವಾದ ಸಾಲುಗಳನ್ನು ಕಾಪಿ ಮಾಡಲೇ ಹೋದ್ರೆ ಇಡೀ ಪದ್ಯನೆ ಹಾಕವು ..
ಆದರೂ
ಬೆಳ್ಳಿ ಹಿಮದೆದೆಯಲ್ಲಿ
ಬೆಚ್ಚಗಿನ ಪಾದವು ಸೋಕಲು
ಅಚ್ಚಾಯಿತು ಹೆಜ್ಜೆಯ ಗುರುತು
ಮೆಚ್ಚುಗೆಯ ಒಪ್ಪಿಗೆಯಂತೆ. .....
ಸೂಪರ್ ...
ಧನ್ಯವಾದ
Deleteಚಂದದ ಫೋಟೋಕ್ಕೊಂದು ಸುಂದರ ಕವನ :-)
ReplyDeleteಮಯೂರದಲ್ಲಿ ಗೆಲ್ಲದಿದ್ದರೇನಂತೆ ವೀಣಕ್ಕಾ, ಈ ಕವನ ನಮ್ಮೆಲ್ಲರ ಹೃದಯ ಗೆದ್ದಿದೆ. ಇಬ್ಬರಿಗೂ ಅಭಿನಂದಗೆಗಳು :-)
ಧನ್ಯವಾದ
Delete