ನೀರಲ್ಲಿ ಅರಳಿದ
ಬಿಳಿಕಮಲದ ಮೊಗ್ಗೊಂದು
ನೂರ್ಮಡಿಸುವ ಆಸೆಯ
ಹೊತ್ತು ಅರಳುತಿದೆ ಬಿರಿದು
ಪಕಳೆಯಲಿ ನಸುಗೆಂಪು
ತನ್ನೊಳಗೆ ಹೊಸಕಂಪು
ತಂಗಾಳಿಯ ಹಿತಸ್ಪರ್ಷಕೆ
ನಗುನಗುತ ತಲೆದೂಗಿ
ಹೇಳಿದೆ ಭಾಸ್ಕರಗೆ ಶುಭೋದಯ..
ಬುಡದಲ್ಲಿ ಕರಿಗೆಸರು
ಸುತ್ತೆಲ್ಲ ಬಳ್ಳಿಗಳ ಅಡರು
ನಡುವಲ್ಲಿ ಪುಟ್ಟ
ಜೀವಿಗಳ ಸಂತಾನ
ಪರೋಪಕಾರಿಯು ಅಹುದು
ಹೂಗಳ ಅರಸಿ.
ಅಲೆಗಳ ಕುಲುಕಾಟ
ದೋಣಿಗಳ ತಿರುಗಾಟ
ಕೀಟಗಳದ್ದಂತೂ ಎಲೆ ಹೂವ
ಕೊರೆಯುತ ಆಹಾರದ ಹುಡುಕಾಟ
ಕ್ಷಮೆಯಾ ಧರಿತ್ರಿಯ ಮಗಳೇ
ನೀ ಸೌಖ್ಯಕಾರಿಣಿ.!
ಸೌಂದರ್ಯದ ರಾಶಿ ನೀ;
ರೂಪದಲಿ ರಾಣಿ .
ಸುರ-ದೇವತೆಗಳ ಆಸನವು
ನೀ ಚಂದ್ರಮುಖಿ
ಕ್ಷಣಿಕ ಬದುಕಲೂ ಪಡೆವೆ
ಸಾರ್ಥಕ್ಯದ ಪರಿಪೂರ್ಣತೆಯ
ಓ ಕಮಲವೇ ನೀ ನಿಜಕ್ಕೂ ಸೌಭಾಗ್ಯವತಿ.
--- ಮೌನ ವೀಣೆ
ಚಿತ್ರ ಕೃಪೆ - ಅಂತರ್ಜಾಲ
Excellently Written... Keep Writing. All the best.
ReplyDeleteThanks alot..
Deleteಕೇಸರಿನ ಕಮಲ ಎನ್ನುವು ಬಲು ನಿಜ. ನೂರು ಹಿಂಸೆಗಳ ನಡುವೆ ಅರಳಿ ನಿಂತು ಸೊಬಗು ಸೂಸುವ ತಾವರೆಯು ನಮಗೆ ಎನಿತೋ ಆದರ್ಶಮಯೀ.
ReplyDeletehttp://badari-poems.blogspot.in
ನಿಜ..
Deleteಕಮಲದ ಕ್ಷಣಿಕ ಸಾಥಕ ಬದುಕು ಆದರ್ಶಪ್ರಾಯವಾಗಿದೆ.
ಧನ್ಯವಾದಗಳು ಸರ್
ತುಂಬಾ ಇಷ್ಟವಾಯ್ತು .ಸಾಲುಗಳೂ ,ಭಾವವೂ .
ReplyDeleteಬರೀತಾ ಇರಿ .
ಧನ್ಯವಾದಗಳು
Deletenice poem veena.. keep it up..
ReplyDeleteಧನ್ಯವಾದಗಳು
Delete