ಮಧುರ ಮೈತ್ರಿಯ
ಸವಿಮಧುವಿನ ಸಿಹಿಯ ಮೆಲ್ಲುತ್ತ
ಮೆಲ್ಲನೆ ಜಾರಿದೆ ಮೊದಲ ಮಾಸ
ಒಲವ ಮಾಧುರ್ಯದ ಕ್ಷಣಗಳು
ಮನದ ಆಳದಿ ಮೌನ ಕೇಳಿದೆ
ಕಳೆದುಹೋಯಿತೆ!
ಮದುವೆಯಾಗಿ ತಿಂಗಳು!!?
ಮದುವೆಯಾಗಿ ತಿಂಗಳು!!?
ದಿನ ಕಳೆದಿದೆ ಕ್ಷಣದಂತೆ
ಬಾಳ ನಂಟುಗಳೆಲ್ಲ ಗಂಟಾಗಿ
ಒಟ್ಟಾಗಿ ಸುತ್ತಿದೆ
ಅನುರಾಗ -ಅಭಿಮಾನ ಮಮತೆಯ
ಕಡಲಿನ ಕಟ್ಟೆ ತನ್ನೊಳಗೆ ಒಡೆದಿದೆ
ಭಾವಗಳು ಪರವಶವಾಗಿ
ಬಣ್ಣದೊಕುಳಿಯಾಗಿವೆ
ಬದುಕಿನ ಪೂರ್ಣತೆಯ
ಸಾರ್ಥಕ್ಯದೆಡೆಗೆ
ಸಾರ್ಥಕ್ಯದೆಡೆಗೆ
ಹಜ್ಜೆಗೆ ಗೆಜ್ಜೆ
ಘಲ್ಲೆನ್ನುತ ಸಾಗಿದೆ
ಘಲ್ಲೆನ್ನುತ ಸಾಗಿದೆ
ಪ್ರೀತಿ ರಾಘವನ ಒಲವಿನ
ಕೊಳಲ ಹಾಡಿಗೆ ಮೌನವೀಣೆ
ಕೊಳಲ ಹಾಡಿಗೆ ಮೌನವೀಣೆ
ಹಿತವಾಗಿ ನವಿರಾಗಿ ಮೀಟಿದೆ
-- ಮೌನವೀಣೆ
ಮೌನವೀಣೆಯ ನಾದ ನೂರು ವಸಂತಗಳ ಬಾಳ್ವೆಗೆ ರಾಗ ಹಾಡಲಿ ವೀಣಾ ಅವರೇ
ReplyDeleteಧನ್ಯವಾದಗಳು..:)
Deleteಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ ಅಂತಾರೆ ಖುಷಿಯಿಂದ ನಮ್ಮ ವೀಣಾ...
ReplyDeletehttp://badari-poems.blogspot.in/
ಧನ್ಯವಾದಗಳುಸರ್ .. ನಿಮ್ಮ ಪ್ರೋತ್ಸಾಹ ಪೂರ್ವಕ ಹಾರೈಕೆ ಎಂದೂ ಹೀಗೆ :)
Delete