Total Pageviews

Wednesday, 21 August 2013

ಇನಿದನಿ




ಇಂಪಾದ ಗಾನ ಕೇಳಿದಾಗೆಲ್ಲ
ಇನಿಯಾ ನಿನ್ನ 
ಇನಿದನಿಯ ಪಿಸುಮಾತು 
ಇಂಚಿಂಚಾಗಿ
ಇಳಿದು ಮನದೊಳಗೆ 
ಇಬ್ಬನಿಯ ಶುಷ್ಕದಲಿ
ಇಷ್ಟಿಷ್ಟೇ ತೋಯ್ದು ತೇವವಾದಂತೆ 
ಇಮ್ಮಡಿಸಿದವು ಆಸೆಗಳ
ಇಂಚರವಾಗಿ. . 


ಕಲ್ಪನೆಗಳ ಕವನಗಳು 
ಕನವರಿಕೆಯ ಕನಸುಗಳು 
ಕವಲೊಡೆದು ಕಾಡಿ 
ಕಟ್ಟಿಬಿಟ್ಟವು ಕಾಮನಬಿಲ್ಲ 
ಕನ್ನಡಿಯ ಅಂಚಲ್ಲಿ 
ಕಣ್ ಕೊರೈಸುವಂತೆ 
ಕದಡಿ ಹಲವು ಬಣ್ಣವಾಗಿ..  


ನೀ ಕೇಳಿದ ಒಗಟು
ನಿನ್ನಾಪ್ತತೆಯ ಭಾವುಕತೆ
ನೀಕೊಟ್ಟ ಮಾತು  
ನೀ ಬೆಸೆದ ಬಾಳ ಭಾಂದವ್ಯ
ನಿಸ್ವಾರ್ಥ ತುಂಬಿದ ಪ್ರೇಮ
ನಿನ್ನಾಗಿಸಿದೆ ನನ್ನ
ನಿಸ್ಸಂಶಯವಾಗಿ..

14 comments:

  1. Supeeeeeer Veena.......:) :) : ) : ) keeps writing ..

    ReplyDelete
  2. ಇಂಪಾದ ಗಾನ ಕೇಳಿದಾಗೆಲ್ಲ
    ಇನಿಯಾ ನಿನ್ನ
    ಇನಿದನಿಯ ಪಿಸುಮಾತು

    ಪ್ರಾರಂಭದಲ್ಲೆ ಗಮನ ಸೆಳೆಯುವ ಸಾಲುಗಳು. ಕವನದ ಪ್ರತಿಯೊಂದು ಸಾಲುಗಳು ಒಂದೆ ಅಕ್ಷರದಿಂದ ಪ್ರಾರಂಭ ಮಾಡಿರ ಹೊಸ ಪ್ರಯತ್ನ ಚನ್ನಾಗಿದೆ. ಸುಂದರವಾಗಿದೆ.

    ReplyDelete
  3. ಹೆಣ್ಣಿನ ಮನಸು ಶರಧಿ ವೈಶಾಲ್ಯತೆ ಪಡೆವಾಗ ಇಂತಹ ಕಾವ್ಯ ಕುಸುಮಗಳು ಫಲಿಸುತ್ತವೆ.

    ReplyDelete
  4. ಚಂದದ ಭಾವ :)

    ಅದ್ಯಾಕೋ ಕವನಗಳ ಅಷ್ಟಾಗಿ ಇಷ್ಟಪಡದವರಿಗೂ ಈ ಭಾವಗಳ ಓದಿದ ಮೇಲೆ ಕವನಗಳ ಓದೋಕೆ ಸ್ಪೂರ್ತಿ ಸಿಗೋದಂತೂ ಸುಳ್ಳಲ್ಲ ..
    ಇಷ್ಟ ಆಯ್ತು

    ReplyDelete
    Replies
    1. ಧನ್ಯವಾದ..

      ನಿಮ್ಮ ಸಿಹಿ ನುಡಿಯ ಉತ್ತರಕೆ.

      ಕಾವ್ಯದ ಮೋಡಿಯೇ ಹಾಗೆ. ಬೇಡೆಂದು ಕಾಲ್ಕಿತ್ತು ಓಡಿದವರನ್ನೂ ನೆನಪಾಗಿ ಕಾಡಿ ಕಟ್ಟಿ ಬಿಡುತ್ತದೆ. ಮತ್ತೆ ಓಡುವ ಪ್ರಯತ್ನ ಮಾಡಲೂ ಮನ ಬಾರದಂತೆ. ಆಗಾಗ ಬರುತ್ತಿರಿ ಬ್ಲಾಗಿಗೆ, ಉತ್ತೇಜಿಸುತ್ತಿರಿ.

      Delete
  5. ನಾನು ಓದಿದ ಸೊಗಸಾದ ಕವನಗಳಲ್ಲಿ ಇದೂ ಒಂದು. ಸುಂದರ ಪದಪುಂಜ,ಬಳಸಿದ ಉಪಮೆ ತುಂಬಾ ಚೆನ್ನಾಗಿದೆ.
    ನನ್ನ ಬ್ಲಾಗಿಗೂ ಭೇಟಿ ಕೊಡಿ, ನೋವು-ಹತಾಷೆ, ಪ್ರೀತಿ, ಪ್ರವಾಸ, ಖುಶಿ ಎಲ್ಲವೂ ಮಿಶ್ರಿತ ಒಂದು ಕಥೆ ಇದೆ.

    ReplyDelete
    Replies
    1. ಧನ್ಯವಾದ..

      ಬರವಣಿಗೆಯ ಹವ್ಯಾಸ ಹಾಗೇ ಅಲ್ಲವೇ?? ಮೂಡಿದ ಭಾವಕ್ಕೊಂದು ಮನದ ಮೂಲೆಯ ಶಬ್ದ ಜೋಡಣೆ ಅಷ್ಟೇ.

      ನೋವು-ನಲಿವು, ಪ್ರೀತಿ-ಪ್ರೇಮ, ಅಭಿಮಾನ- ಅಪ್ಯಾಯತೆ, ಬೇಸರ- ಬೇಗುದಿ, ಮಮತೆ-ಬಾಂಧವ್ಯ ಖುಷಿ-ಕನಸು ಹೀಗೆ ಹಲವು ಅನುಭೂತಿಯ ಆಗರ ನಮ್ಮ ಜೀವನ.


      ಸಿಹಿಕ್ಷಣಗಳು ಬದುಕಲ್ಲಿ ಹೆಚ್ಚಾಗಿ ತುಂಬಲಿ ಎಂಬ ಆಶಯ..

      Delete
  6. ನನಗೂ ಹೊಟ್ಟೆ ಕಿಚ್ಚು ಬಂದೇ ಬಿಟ್ಟಿತು, ಎಂಥಹ ಭಾಷಾ ಲಾಲಿತ್ಯ ಪದಪುಂಜಗಳ ಜೋಡಣೆ; ತರ ತರಹದ ಹೂಗಳ ಕಟ್ಟಿದ ಕಾವ್ಯಮಾಲೆ. ತುಂಬಾ ಚಂದದ ಭಾವ ಸಮರ್ಪಣೆ ವೀಣಾ ಭಟ್ಟರೆ.

    ReplyDelete
    Replies
    1. ಧನ್ಯವಾದ..

      ಬಾವುಕತೆಯ ಖುಷಿಯೇ ಹಾಗಲ್ಲವೇ. ಯಾವ ಶಬ್ದ ಯಾವ ಹಾಡು ಒಂದೂ ಅರಿಯದ ಮನ ದಿಡೀರ್ ಅಂತ ಏನೋ ಒಂದು ಕಲ್ಪನೆಯ ಹುಟ್ಟಿಸಿ ಬರೆಯುವ ಹಾಗೆ ಮಾಡಿ ಬಿಡುತ್ತದೆ. ಬರೆದ ಮೇಲೆ ಏನೋ ಒಂಥರಾ ಸಮಾಧಾನದ ಭಾವ ಭಾವ-ವಿಕಿರಣ ಹೊರ ಹೋದ ನಿರಾಳತೆ ಅನಿಸ್ಸುತ್ತೆ.

      ಆಗಾಗ ಬರುತ್ತಿರಿ ನಮ್ಮ ಬ್ಲಾಗಿನ ಬಳಿಗೆ..

      Delete
  7. ವಾಹ್.. ವಾಹ್ !!

    ಶಬ್ಧಗಳಲ್ಲಿ ಸುಂದರ ಭಾವಗಳನ್ನು ಬಿಡಿಸಿದ್ದೀರಿ..

    ಅಭಿನಂದನೆಗಳು ಚಂದದ ಕವನ ಚಿತ್ತಾರಕ್ಕೆ...

    ReplyDelete
  8. ಧನ್ಯವಾದ ಪ್ರಕಾಶಣ್ಣ.

    ReplyDelete

Thanks