Total Pageviews
Wednesday, 8 August 2012
Friday, 27 July 2012
ಜಾರುತಿದೆ ಮನಸು
ಜಾರಿಹೋಗಿದೆ ಮನಸು
ಅನಿಸಿದೆ...
ಜಾದೂವಾಗಿದೆ ನನಗೆ.
ಮೋಡಿ ಮಾಡಿದೆ ಮಳೆಯು
ಮಂದಗಾಳಿಯ ಕಳಿಸಿ.
ಬಿಡದೆ ಕಾದಿದೆ ನೆನಪು
ಕಾರಣಿಲ್ಲದ ಹುರುಪು!!!.
ಒಂಟಿ ಬಾಳಿಗೆ ನೀನು
ಅಂಟಿ ಬರುವೆನು ಎಂದೆ.,
ಗಂಟು ಹಾಕಿದ ಮೇಲೆ
ನಂಟು ಬೆಸೆಯುವುದಂತೆ..
ಮುಗ್ದ ಜೀವಕೆ ನೀನು
ಬೆಟ್ಟದಾಸರೆಯಂತೆ..
ನಿನ್ನ ಕಷ್ಟದೊಳೆಲ್ಲ
ನನಗೂ ಪಾಲಿದೆಯಂತೆ..
ಪ್ರೀತಿ ಕಡಲಿಗೆ ನೀನು
ಭದ್ರ ಸೇತುವೆಯಂತೆ..
ಮನದ ಮುಗಿಲಲಿ ನೀನು
ನಗುವ ನೇಸರನಂತೆ ...
ಚಿಗುರೊ ಬಳ್ಳಿಲಿ
ಹೊಸದು ಮೊಗ್ಗಾದ ಹಾಗೆ,
ತಾಯ ಹೆಸರ ಕೇಳಿ
ಮಗು ಕರೆದ ಹಾಗೆ,
ಮಳೆಯ ಮೋಡವ ಕಂಡು
ನವಿಲು ಕುಣಿಯುವ ಹಾಗೆ,
ನೀರಿಲ್ಲದೆ ಮೀನು
ಚಡಪಡಿಸುವಾ ಹಾಗೆ,
ನಿನ್ನ ಒಲವಿಗೆ ಹೃದಯ
ಮಿಡಿಯುವುದು ಹೀಗೆ...!!!
Tuesday, 3 July 2012
ಸಾಗುತಿದೆ...
ಗುರಿ ಇಲ್ಲದ ಬದುಕು
ಬಯಸುವ ಮನ
ನಿಲುಕದ ಕನಸು***
ನೆನಪುಗಳ ತಡಕಾಟ
ಭಾವನೆಗಳ ಹೊಯ್ದಾಟ!
ಮುಗಿಯದ ದಾರಿ!!
ಭರವಸೆಯ ಬೆನ್ನಟ್ಟಿ ಸಾಗುತಿದೆ..
ದಾರಿಗಳು ಹಲವಾರು
ತವಕಗಳು ನೂರಾರು
ಮನದಲ್ಲಿ ದುಗುಡ!
ಬಯಸುವ ಮನ
ನಿಲುಕದ ಕನಸು***
ನೆನಪುಗಳ ತಡಕಾಟ
ಭಾವನೆಗಳ ಹೊಯ್ದಾಟ!
ಮುಗಿಯದ ದಾರಿ!!
ಭರವಸೆಯ ಬೆನ್ನಟ್ಟಿ ಸಾಗುತಿದೆ..
ದಾರಿಗಳು ಹಲವಾರು
ತವಕಗಳು ನೂರಾರು
ಮನದಲ್ಲಿ ದುಗುಡ!
ಕಣ್ಣಮುಚ್ಚಿ ಸಾಗುತಿದೆ,
ನೆಲೆ ಇಲ್ಲದ ಜೀವನ...
ನೆಲೆ ಇಲ್ಲದ ಜೀವನ...
ಹಲವಾರು ಚಿಂತೆಗಳು
ಮುಗಿಯದದರ ಕಂತುಗಳು!
ನಡುಸುಳಿವ ಕವಲುಗಳು.!!
ದಿಕ್ಕೆಟ್ಟ ನಾವೆ,
ಎತ್ತಲೋ ಪಯಣ,
ಹುಚ್ಚೆದ್ದು ಸಾಗುತಿದೆ...
Wednesday, 20 June 2012
ಪ್ರೀತಿ
ಮುಗುದೆಯೊಳಗಣ ಕುಸುಮದಂತೆ
ನನ್ನೊಡಲ ಪ್ರೀತಿ
ಹಿಗ್ಗಿ ಬಿರಿಯಲು ತವಕ.!!
ಕಟ್ಟೊಡೆದ ಕಡಲಂತೆ
ನನ್ನ ಹೆಮ್ಮೆಯ ಪ್ರೀತಿ
ಜಾರಿ ಸಾಗುವ ತವಕ..!!
ತೇಲಿ ಓಡುವ ಮೋಡದ ತೆರದಿ
ನನ್ನಾಸೆಯ ಪ್ರೀತಿ
ಕರಗಿ ಹನಿಯಾಗುವ ತವಕ!!
ಮಲೆನಾಡ ಮಳೆಯಂತೆ
ಈ ಜೀವದ ಪ್ರೀತಿ
ತವಕದಲಿ ಮಿಡಿಯುತಿದೆ
ಕಟ್ಟಿಕೊಳ್ಳಲು ಬದುಕ..
Tuesday, 5 June 2012
ಹಂಬಲ
ಇಳಿಸಂಜೆ ಕಳೆವಾಗ
ಮಳೆಯಲ್ಲಿ ನೆನೆದಾಗ
ನೀ ದೂರ ಇರುವಾಗ
ಹೇಗೆ ಕಳೆಯಲಿ ಸಮಯ..
ನಿನ ನೆನಪು ಬಂದಾಗ ?
ಕಲ್ಪನೆಯ ಕಾವ್ಯಗಳು
ಮನತುಂಬಿ ನಿಂತಾಗ
ನವಭಾವ ತುಂಬಿತುಂಬಿ..
ಮನಹಾಡಿದಾಗ..
ಈ ಜೀವ ನಿನ ಸನಿಹ
ಹಂಬಲಿಸಿದಾಗ..
ಹೇಗೆ ಸಹಿಸಲಿ ವಿರಹ
ನೀನಿಲ್ಲದಾಗ ???
ನೆನಪಲ್ಲಿ ನನ್ನ ಹೃದಯ
ಬಿಕ್ಕಳಿಸಿದಾಗ
ಬರುವೆನೆಂದರು ಬರದೆ
Tuesday, 29 May 2012
ನೀನು..
ಮನದಲ್ಲಿ ಮೊಳೆತ
ಮಧುರ ಮಲ್ಲಿಗೆ ನೀನು..
ಭಾವದಲಿ ಬೆರೆತ
ಬಾನಾಡಿ ನೀನು...
ಕನಸಲ್ಲಿ ಕರೆದ
ಕನವರಿಕೆ ನೀನು..
ಮಧುವಲ್ಲಿ ಬೆರೆತ
ಮಕರಂಧ ನೀನು..
ಬೆಳಕಲ್ಲಿ ಬೆರೆತ
ಬೆಳದಿಂಗಳು ನೀನು..
ಪುಸ್ತಕದಲ್ಲಿರುವ
ಮುಖಪುಟವೆ ನೀನು..
ಕವಿಗಳಲ್ಲಿಯೇ ಶ್ರೇಷ್ಟ
ಕವಿಪುಂಗವ ನೀನು..
ನನ್ನಲ್ಲಿ ಕಲೆತ
ನನ್ನಾಸೆ ನೀನು..
ನನ್ನ ಹೃದಯವ ಕದ್ದ
ನನ್ನೊಡೆಯ ನೀನು..
ಅಂತರಂಗದಲ್ಲಿರುವ
ಅಂತರಾತ್ಮವೇ ನೀನು..
Thursday, 24 May 2012
ಕಷ್ಟ
ಬದುಕುವುದು ಕಷ್ಟ ಬರಗಾಲದಲ್ಲಿ
ನಡೆಯುವುದು ಕಷ್ಟ ಬರಿಗಾಲಿನಲ್ಲಿ
ಬಯಸಿದರೆ ಕಷ್ಟ ಬದಲಾಗದಲ್ಲಿ
ಬರೆಯುದು ಕಷ್ಟ ಬಹುಭಾಷೆಯಲ್ಲಿ
ಅಡಗುವುದು ಕಷ್ಟ ನಡುಬೀದಿಯಲ್ಲಿ
ಅಲೆಯುವುದು ಕಷ್ಟ ಪರನಾಡಿನಲ್ಲಿ
ಮರೆಯುವುದು ಕಷ್ಟ ಮನದಾಳದಲ್ಲಿ
ಕರೆಯುವುದು ಕಷ್ಟ ಜನಜಾತ್ರೆಯಲ್ಲಿ
Subscribe to:
Posts (Atom)




