ನನ್ನೊಳಗೆ ತವಕ
ಒಳಗೊಳಗೆ ನಡುಕ
ಹುರುಳಿಲ್ಲದ ಹುನ್ನಾರ
ಅವಿತಿಹುದು ಒಳಗೆ!!.
ಹುಚ್ಚು ಬೆಚ್ಚನೆ ಕನಸು
ಹೆಚ್ಚಿ ಹರಿಯುವ ವಯಸು
ಹುಚ್ಚು ಕೋಡಿಯ ಮನಸು
ಬಯಸಿ ಕಾಯುತಲಿಹುದು..!!
ಬಗೆಹರಿಯದಾ.. ಕಲಹ
ಬಲಿಯಿರಲು ನೀ ಸನಿಹ
ಮೌನದೊಳಗಿನ ಮಾತಿಗೆ
ದನಿಯಿಲ್ಲವೆಕೆ???
ದನಿಯಿಲ್ಲವೆಕೆ???
No comments:
Post a Comment
Thanks