ಮನದಲ್ಲಿ ಗೊಂದಲವೇಕೆ?
ಬಯಕೆಗಳ ಬಾಂದಳವೇಕೆ?
ನಗನಾಣ್ಯದ ಹಂಬಲವೇಕೆ?
ಪ್ರಕ್ರತಿಯ ಸೊಭಗಿರಲು,
ಕಲ್ಪನೆಯ ಕಣ್ಣಿರಲು,
ಕನಸಿನ ಸಾಮ್ರಾಜ್ಯಕ್ಕೆ ಬೇರೆ
ಗೋಪುರ ಕಟ್ಟಬೇಕೆ?
ಸಣ್ಣ-ದೊಡ್ಡವ ಎಂಬ ಬೇಧವೇಕೆ?
ತುಚ್ಛ ಬೇಧದ ಭಾವವೇಕೆ??
ಕಟ್ಟಿದ ಕಾರ್ಮುಗಿಲು ದೂರಸರಿದಾಗ
ದುರಾಸೆಯ ಪಟ್ಟ ಕೊರಗೇಕೆ??
ಮನಪಕ್ಷಿಯ ಹಾರಿಬಿಡು;
ನೀಲಾಕಾಶದಲಿ ಕುಣಿಯುತಿರಲಿ.
ಕರುಣರಸ ಕಾರಂಜಿಯಂತೆ ಚಿಮ್ಮಿಬರಲಿ.
ಇದು ಹೊಸಬಾಳಿಗೆ,
ಹೊಸನಾಳೆಗೆ,
ಶುಭನಾಂಧಿಯ ಹಾಡುತಿರಲಿ...
ಚಂದ ಬರದ್ಯೆ......
ReplyDeleteಎಲ್ಲವೂ ಕಾರಂಜಿಯಂತೆ ಚಿಮ್ಮೋ ಕುತೂಹಲಕ್ಕಾಗಿ.......
so super.. Veena.. Keep it Up
ReplyDelete