'ನಾನು
ಮತ್ತು ನನ್ನ ಕನಸು' ಇವೇ ನನ್ನಯ ಬದುಕು ಎಂಬಂತೆ ಛಲದಲ್ಲಿ ಬದುಕುತ್ತಿರುವ ಜನ
ನಮ್ಮ ಶಂಕ್ರಣ್ಣ ( ಶಂಕರ ಭಟ್ ). ಸಾರ್ಥಕ್ಯದ ಜೀವನ. ಪ್ರತಿಯೊಬ್ಬರ ಕನಸು - ತಾನು
ಮತ್ತು ತನ್ನದೊಂದು ಕುಟುಂಬ, ತನ್ನ ಮಕ್ಕಳು, ಒಂದು ಪುಟ್ಟ ಮನೆ, ಬದುಕಿಗೊಂದಿಷ್ಟು ಸಣ್ಣ
ಆದಾಯ , ಆ ಆದಾಯಕ್ಕನುಸಾರ ಖರ್ಚುಗಳು , ಒಂದಿಷ್ಟು ಆಸೆಗಳು, ಕೈಗೂಡಿಸಲು ಪ್ರಯತ್ನ
ಅವುಗಳ ಜೊತೆ ಒಂದಿಷ್ಟು ಸಮಾಧಾನ ತೃಪ್ತಿಗಳು . ಆದರೆ ತಾನೊಂದು ಬಗೆದರೆ ದೈವ ಬೇರೊಂದೇ
ಬಗೆಯುವುದು ಎಂಬಂತೆ "ಥಲಸ್ಸೆಮಿಯ ಮೇಜರ್" ಅನಾರೋಗ್ಯದ ಭೂತ ಅವನ ಪುಟ್ಟ ಕಂದಮ್ಮನ
ಬೆನ್ನತ್ತ ಬೇಕಾ ? ಲಕ್ಷಕ್ಕೊಬ್ಬರಿಗೆ ಬರುವುದಂತೆ ಆ ಕಾಯಿಲೆ; ಆ ಪುಟ್ಟಮ್ಮನಿಗೇ
ಬರಬೇಕಾ ? ಪಾಪ ಕಳೆದ ೩ ವರ್ಷಗಳಿಂದ ಅವಳ ಕಾಯಿಲೆಯ ಹತೋಟಿಗೆ ಅವರು ಪಟ್ಟ ಪಾಡು ಅವರಿಗೆ
ಗೊತ್ತು ಮತ್ತು ದೇವರಿಗೆ ಗೊತ್ತು. ಅವಳಿಗೆ ತನಗಾದ ಕಾಯಿಲೆಯ ಹೆಸರ ಹೇಳಲೂ ಬಾರದ 5th
ಕ್ಲಾಸಿನ ಪುಟ್ಟ ಪೋರಿಗೆ ಬಂದಿದೆ ಎಂಬುದು ವಿಷಾದನೀಯ. ಖಾಯಂ ಆಗಿ ಆಕೆಯ ಜೀವದಲ್ಲಿ ರಕ್ತ
ಉತ್ಪತ್ತಿಯಾಗಲು ಉತ್ತಮ ಚಿಕಿತ್ಸೆಯ ಅವಶ್ಯಕತೆಯಿದೆ ಮತ್ತೆ ಅದಕ್ಕೆ ತಗಲುವ ವೆಚ್ಚವೂ
ಬಹಳ ದೊಡ್ಡದು(೨೦ ಲಕ್ಷ).ಸಣ್ಣ ಬಡ ರೈತ ಎಷ್ಟರ ಮಟ್ಟಿಗೆ ಹೊಂದಿಸಲು ಸಾದ್ಯ ನೀವೇ ಹೇಳಿ?
ದಯವಿಟ್ಟು ನಿಮ್ಮಗಳ ಹಣದ ಋಣ ಆ ಪುಟಾಣಿ ಮೈತ್ರಿಗಿರಲಿ. ನಿಮ್ಮನೆಯ ಹುಡುಗಿಗೆ ನೀವು
ಸಹಾಯ ಮಾಡಲಾರಿರಾ? ಹೇಳಿರುವುದು ಸುಳ್ಳು ಮೋಸ ಎಂದೆನಿಸಿದರೆ ವಿಚಾರಿಸಿಯೇ
ಮುಂದುವರೆಯಿರಿ. ದೇವರು ಒಳ್ಳೆಯದು ಮಾಡಲಿ.
ಬಾಲಕಿಯ ಚಕಿತ್ಸೆಗೆ ನೆರವಾಗುವವರು ಸಂಪರ್ಕಿಸಿ -
ಶಂಕರ ಭಟ್
Ph. 8762759505
ವಿಜಯಾ ಬ್ಯಾಂಕ್ ಯಲ್ಲಾಪುರ SB A/C - 1226010011000314
ಕರ್ನಾಟಕ ಬ್ಯಾಂಕ್ SB A/C - 352250010021501
https://www.facebook.com/shankar.bhat.940
ಹೊಸ ವರುಷ
ಹೊಸ ಆಸೆ
ಹೊಸತನದ ಸ್ಪುರಣೆಯಲಿ
ಹೊಸ ಮೈತ್ರಿಯ
ಹೊಂಗನಸ ಕೈಗೂಡಿಸುವ ತೃಷೆಯಲ್ಲಿ
ನಿಮ್ಮ ಪ್ರೀತಿ ಹಾರೈಕೆ
ನಿಮ್ಮ ಋಣಗಳು ಜೊತೆಯಿರಲಿ
ಈ ಮೈತ್ರಿಯ ಬಾಳಿನಲಿ
ಬೆಳಗಲಿ ಉತ್ಸಾಹದಿ
ಅವಳೆಲ್ಲ ನಾಳೆಗಳು ಎಂದು ಹಾರೈಸೋಣ...
-- ಮೌನ ವೀಣೆ
ಆ ವ್ಯಕ್ತಿಯನ್ನ ನಾನು ವಾರಕ್ಕೊಮ್ಮೆಯಾದರೂ ನೋಡುತ್ತೇನೆ.....
ReplyDeleteಖಂಡಿತಾ ನಮ್ಮಿಂದಾದ ಸಹಾಯ ನಾವು ಮಾಡಲೇ ಬೇಕು.
ಆ ದಿಸೆಯಲ್ಲಿ ಇದೂ ಕೂಡಾ ಒಂದು ಓಳ್ಳೇ ಪ್ರಯತ್ನ....