Total Pageviews

Monday, 21 January 2013

ಮತ್ತೆ ಬಾರದೇ ..ಕಳೆದುಹೋದ ಆ ಸುಂದರ ಸಂಜೆಗಳು..


ಇಂದೇಕೋ ಎಲ್ಲ ಕಳೆದುಕೊಂಡ ಭಾವ. ಪ್ರಪಂಚದ ಎಲ್ಲ ಜಡತ್ವದ ಅಂಶಗಳು ನನ್ನನ್ನೇ ಮುತ್ತಿಕೊಂಡಂತೆ. ಮಲಗಿದ್ದಲ್ಲೇ ಮಲಗಿ ಆರೋಗ್ಯವಾಗಿದ್ದರೂ ಆಲಸ್ಯತನವಂಟಿ ಏನೋ ಅನಾರೋಗ್ಯದ ಛಾಯೆ. ಅದೇ ಯಾಂತ್ರಿಕ ಬದುಕು, ಅದೇ office (ಅದೇ ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡುವುದು) ಅದೇ ಕಂಪ್ಯೂಟರ್ ಪ್ರಪಂಚ. Google ಜೊತೆ ಒಂದಿಷ್ಟು ಹಗ್ಗಜಗ್ಗಾಟ, ಪ್ರತಿದಿನ ಬೆಳಗಾದರೆ ದಿನಚರಿ ಮುಗಿಸಿ ಆಫೀಸಿಗೆ ಓಡುವ ಧಾವಂತ. ಇನ್ನು ಸಂಜೆಯೋ ಅದೇ ಹಳೆ ವಿಷಯಗಳ ಚಿಂತನ-ಮಂಥನಗಳು ಆ client traffic drop ಆಯ್ತು  ಈ client rank ಇಲ್ಲ. ಮಾಡೋವಷ್ಟು work ಮಾಡಿದೀವಿ, actually we did good and more work for the traffic dropped why??? ಅದೇ ಒಂದಿಷ್ಟು ಚರ್ಚೆಗಳು, ಹಾಗೇ ನಾಲ್ಕಾರು colleague ಗೆಳತಿಯರಿಗೆ ಟಾಟಾ - bye ಹೇಳಿ ಇನ್ನಿಬ್ಬರು  ಗೆಳತಿಯರೊಂದಿಗೆ ಮನೆಯ ಕಡೆ ಪಯಣ. ಇರುವ ಮೂವರದ್ದೂ ಒಬ್ಬೊಬ್ಬರದ್ದು ಒಂದೊಂದು ಊರು. ಅದರಲ್ಲಿ ಅವರದೇ ಆದ ಒಂದಷ್ಟು ತಮ್ಮೂರ ಬಗೆಗಿನ ಒಣ  ಪ್ರತಿಷ್ಟೆಗಳು (ಇರಲೇ ಬೇಕು ಬಿಡಿ ಎಷ್ಟಂದ್ರೂ ಸ್ವರ್ಗಕ್ಕಿಂತಲೂ ಮಿಗಿಲಾದ ತಾಯ್ನೆಲ). ನನ್ನ ಮತ್ತು ಶೃಧ್ಹಾಳ ಸಣ್ಣ ಪುಟ್ಟ ವಾಗ್ವಾದಗಳು. ಆ ಮೊಂಡು ವಾದಗಳ ಇತ್ಯರ್ಥಕ್ಕೆ ಹಸೀನಾಳ ಮದ್ಯಸ್ಥಿಕೆಯ ಹಿತನುಡಿ. ಅವರಿಬ್ಬರ ವಾದಗಳಲ್ಲಿ ನನ್ನ ಅಂಬೋಣ(vote ups) . ಹೀಗೆ ಒಂದಷ್ಟು ಪ್ರೀತಿಯ ಜಗಳಗಳು, ಸಮಾಧಾನದ ನುಡಿಗಳು. conclusion ಏನು ಗೊತ್ತಾ?? ಯಾಕೋ lifu ಬೋರು. ಈ ದಿನಗಳೇ ಸರಿ ಇಲ್ಲ; ಹಾಗೆ ನಿರಾಶಾವಾದಿಗಳ ಹಾಗೆ ಜೀವನದ ಸುಖ-ದುಃಖಗಳ ಚಿಂತೆನೆಗಳು ಅದಕ್ಕೊಪ್ಪುವ ನಾಟಕೀಯ dialogueಗಳು. ಎಷ್ಟು ಚರ್ಚಿಸಿದರೂ ಅಷ್ಟೇ ಈ ಬದುಕಿನ ಗೋಳುಗಳು ಮುಗಿಯುವುದೇ ಇಲ್ಲವೆಂದು ಹೇಳಿ ಪಯಣ ಮರಳಿ ಗೂಡಿಗೆ. ದೇವರು ಈ ಜೀವಕ್ಕೆ ವರವಾಗಿಕೊಟ್ಟ ತುಂಬು ಪ್ರೀತಿ, ಕಾಳಜಿಯ ಮಹಾಪೂರ, ಹಾಲು ಜೇನಿನ ನನ್ನ family; ಅಪ್ಪ, ಅಮ್ಮ, ಒಬ್ಬಳೆ ತಂಗಿ, ಒಬ್ಬ ತಮ್ಮ ಅವುರುಗಳೊಂದಿಗೆ  ಒಂದೊಂದು ಮಾತು.

ತುಂಬಾ miss ಅನಿಸೋದು weekend ಇಳಿಸಂಜೆಗಳು. ಒಂದಷ್ಟು ಒಂಟಿತನ, ಕಟ್ಟಿದ ಕನಸುಗಳಿಗೆ ಬಣ್ಣ ತುಂಬುವುದು ಯಾವಾಗ ಎಂಬ ವಿಷಾದ, ದೇವರಿಗೆ ಕಿವಿಕೇಳುವುದೋ ಇಲ್ಲವೋ ಎಂಬ ಸಂಶಯ. ಇವುಗಳ ಮದ್ಯ ನೆನಪಾಗುವುದು ಬಾಲ್ಯದ ಸಂಜೆಗಳು. ಈ ಸಮಯ (ಡಿಸೆಂಬರ್ end ), ಶಾಲೆಯಲ್ಲಿ ಇರುವಾಗಲೇ ಚಿಂತೆ ಅಮ್ಮ ಗದ್ದೆಗೆ ಹುಲ್ಲು ಕೊಯ್ಯಲು ಹೋಗಿ ಬಿಟ್ಟಾಳೋ ಏನೋ ಎಂದು. ಏಕೆಂದರೆ ಅವಳೊಡನೆ ಹೋಗಿ ಗದ್ದೆಯಲ್ಲಿನ ಹಸಿಮಣ್ಣಿನಲ್ಲಿ  ಲಾಡು, ಚಕ್ಕಲಿ, ಕಡುಬು, ಕೊಡಬಳೆ ಮಾಡಿ ಒಣಹಾಕುವ  ಬಯಕೆ. ಗದ್ದೆಯ ಕೊನೆಯಲ್ಲಿ ಸಣ್ಣ ಹಳ್ಳ. ಏರಿಯ ಸುತ್ತ ದಟ್ಟವಾಗಿ ಬೆಳೆದ ಹೊಂಗೆಯ ಮರಗಳು. 4 - 5 ಓರಗೆಯ ಹುಡುಗ-ಹುಡುಗಿಯರ ಕೂಡಿ ಹೊಂಗೆ ಬಸ್ ಪ್ರಯಾಣದ ಆಟ. ಎಲೆಗಳೇ currency, ನೇರಳೆ ಎಲೆ 100 ರ ನೋಟು, ಹೊಂಗೆ ಎಲೆ 10 ರ  ನೋಟು, ನನ್ನ ತಮ್ಮನದು ಯಾವಾಗಲು ಕಂಡಕ್ಟರ ಕೆಲಸ, ದೊಡ್ಡಪ್ಪನ  ಮಗ ಯಾವಾಗಲು ಡ್ರೈವರ. ನಾನು,  ತಂಗಿ, ಪದ್ಮ ಎಲ್ಲ ಸಹ ಪ್ರಯಾಣಿಕರು. ಬಸ್ಸಿನಲ್ಲೊಂದಿಷ್ಟು ಆವಾಗಿನ ಹಿಟ್ ಸಿನಿಮಾದ ಹಾಡುಗಳು. ಸುಮ್ನೆ ರೇಡಿಯೋ ಆನ್ ಮಾಡುವುದು, ಹಾಡುವುದು ಮಾತ್ರ ನಾವೇ. ಹಿಂದಿ ಹಾಡುಗಳದ್ದಂತೂ ಸಾಹಿತ್ಯವೇ ತಿಳಿಯುತ್ತಿರಲಿಲ್ಲ. ಆದರೂ ಅದೇ tuneನಲ್ಲಿ ನಮ್ಮ lyrics ತುಂಬಾ ಮಜಾ ಕೊಡುತ್ತಿತ್ತು. ಡಿಮ್ ಧೀಂ ಟರರ್ರಾರರಾರ ಟರರಾರ. ಬುಲುಟರರಾರ..ಟೆವ್.ಟೆಟೆಟೆವ್...ಟೆಡೆಂವ್ ಟೆಡೆಡೆಡೆಂವ್ಡೆಂವ್, ಲಲಾಲಲಲ.. ಲಾಲಲಲ ......etc ಇವು ನಡುವಿನ ಮ್ಯೂಸಿಕ್ ಲೈನ್ ಗಳು. ಕತ್ತಲೆ ಆದದ್ದೇ ತಿಲಿಯುತ್ತಿರಲಿಲ್ಲ. ಕೆಲಸ ಮುಗಿಸಿ ಬಂದ ಅಪ್ಪ ಗದರಿದ ದ್ವನಿಯಲ್ಲಿ ಅಲುಗುತ್ತಿರುವ ನಮ್ಮ ಮರದ ಬಳಿ ಕೋಲುಹಿಡಿದು ಬಂದಾಗಲೇ ವಾಸ್ತವದ ನೆನಪು. ಆವಾಗ compulsory ಒಂದೆರಡು ಏಟುಗಳು. ಕೈಕಾಲು ತೊಳೆದು ಮನಸ್ಸಿಲ್ಲದೇ ಮುಖ ದುಮ್ಮಿಸಿಕೊಂಡು ಹೇಳುವ ಒಂದಷ್ಟು ಮಗ್ಗಿಗಳು ಶ್ಲೋಕಗಳು ಬಾಯಿಪಾಟಗಳು  etc.etc .. ಎಷ್ಟು ಚೆಂದಿತ್ತಪ್ಪಾ ಆ
ಸಂಜೆಗಳು, ಆ ಜೀವನ ..ಅನಿಸುವುದುಂಟು.

11 comments:

  1. Really Veena horatu hogiruv sanje matte tiragi baralla...............

    ReplyDelete
    Replies
    1. ಹೌದು ಹಸೀನಾವರೇ. ಸಮಯ ಯಾರನ್ನು ಕಾಯುವುದಿಲ್ಲ. ಸ್ವಲ್ಪವು ಆಲಸ್ಯತನವಿಲ್ಲದೆ ತನ್ನ ಕೆಲಸ ಮಾಡುತ್ತಿರುತ್ತದೆ.

      Delete
  2. Wow Veena.. nicely written..

    ReplyDelete
    Replies
    1. ಧನ್ಯವಾದ ಮಂಜುಳಾವರೆ. ಓದುತ್ತಾ ಉತ್ತೇಜಿಸುತ್ತಿರಿ. ನಿಮ್ಮ ಕಾಮೆಂಟುಗಳು ಟಾನಿಕ್ ಇದ್ದಂತೆ ಬರೆಯುತ್ತಿರಲು ಪ್ರೇರಣೆ ನೀಡುತ್ತವೆ.

      Delete
  3. ಆ ಸಂಜೆಗಳ ನೆಪದಲ್ಲಿ ಈ ಸಂಜೆಗಳನ್ನೂ ಆ ಸಂಜೆಯಂತೆ ಮಾಡೋ
    ಅವಕಾಶಾನಾ miss ಮಾಡ್ಕೋಬೇಡಿ ಅಷ್ಟೇ....

    ಆ ಸಮಯಗಳು ಬರೋದಿಲ್ಲಾ.... ನಿಜ....
    ಹಾಗಂತ ಈ ಸಮಯದಲ್ಲಿ ಬೇಸರ ಬೇಡ....
    ಇನ್ನೊಂಥರಾ ಅನುಭವ ಕೊಡೋ ಈ ಸಮಯಾನ
    ಗೆಲುವಾಗಿಸಿಕೊಳ್ಳಿ.....

    ಹಳೆಯ ನೆನಪುಗಳನ್ನೆಲ್ಲಾ ಗಂಟಿಟ್ಟುಕೊಳ್ಳುತ್ತಾ ಬರ್ತಿರಬೇಕು....


    ReplyDelete
    Replies
    1. ಧನ್ಯವಾದ ರಾಗಣ್ಣ.
      ನಿಜ ನಿಮ್ಮ ಮಾತು. ಕೆಲವೊಮ್ಮೆ routine ಲೈಫ್ bore ಅನಿಸುತ್ತೆ. ಮೌನದಲ್ಲೊಮ್ಮೆ ಮನಸೊಳಗೆ ಚಿಂತೆ, ಹೆಸರಿಲ್ಲದ ಖುಷಿಗಳು, ಹೆಮ್ಮೆಗಳು, ಅನಾಥಪ್ರಜ್ಞೆ, ಜವಾಬ್ದಾರಿಯ ಬಿಗುಮಾನ, ಮೊದಲಾದ ಭಾವಾವೇಷಗಳ ಚಿಂತನ-ಮಂಥನ ನಡೆದೇ ಇರುತ್ತದೆ ಅಲ್ಲವೇ??

      ಮನಸ್ಸೆಂಬ ಮರ್ಕಟ ತನ್ನಿಚ್ಚೆಯಂತೆ ಜಿಗಿಯುತ್ತದೆ..:) anyway ಆಶಾವಾದಿಗಳಾಗಿರೋಣ..

      Delete
  4. ಹೇ ನಿನ್ನ ಬರಹ ಓದ್ತಾ ಓದ್ತಾ ಹಳೆ ನೆನಪುಗಳಲ್ಲಿ ತೇಲಿ ಹೋದೆ ವೀಣಕ್ಕ...ನಿಜವಾಗಲೂ ಆ ದಿನಗಳು ಎಷ್ಟು ಚೆನ್ನಾಗಿತ್ತು ಅಲ್ದ..ಚಿಕ್ಕಂದಿನ ಆ ಆಟಕ್ಕೆ ಎಲ್ಲೆ ಎಲ್ಲಿದೆ..ಜೀವನದುದ್ದಕ್ಕೂ ನೆನಪುಗಳು ಮಾತ್ರ ೆಂದಿಗೂ ಹಸಿರಾಗಿದೆ..ಆಟದ ಸಮಯವು ಮಜವಾಗಿರುತ್ತಿತ್ತು...
    ಹಳೆ ನೆನಪುಗಳನ್ನು ಮಾಡಿಸಿದ್ದಕ್ಕೆ ಧನ್ಯವಾದಗಳು

    ReplyDelete
    Replies
    1. ಹೌದು ಪದ್ದು...
      ಹಾಡು ಹಳೆಯದಾದರೇನು ಭಾವ ನವನವೀನ ಎಂಬಂತೆ ಹಳೆಯ ಘಟನೆಯಾದರೂ ನೆನಪಿನ ಭಾವ ತುಂಬಾ ಹೊಸದು.. ಆಹ್...ಬಾಲ್ಯಕ್ಕೆ ಸರಿಸಮ ಬಾಲ್ಯವೇ.. ನೆನಪಾಗುತ್ತಿದೆ ಪ್ರೈಮರಿ ಸ್ಕೂಲ್ ಪದ್ಯ ಸುಭದ್ರಕುಮಾರಿಯವರು ಬರೆದದ್ದು - ಆ ಜಾ ಬಚಪನ ಏಕ ಬಾರ್ ಫಿರ್...

      Delete
  5. "ಕೈಕಾಲು ತೊಳೆದು ಮನಸ್ಸಿಲ್ಲದೇ ಮುಖ ದುಮ್ಮಿಸಿಕೊಂಡು ಹೇಳುವ ಒಂದಷ್ಟು ಮಗ್ಗಿಗಳು ಶ್ಲೋಕಗಳು ಬಾಯಿಪಾಟಗಳು" ...ತುಂಬಾ ಇಷ್ಟ ಆಯ್ತು ಈ ಸಾಲುಗಳು ಹಾಗೂ ಲೇಖನ...ಹೀಗೇ ಮುಂದುವರಿಯಲಿ ನಿಮ್ಮ ಬರವಣಿಗೆ.

    ReplyDelete
  6. :) :) ನಿಜ.

    ಬಾಯಿಪಾಟ ಹೇಳೋದು ಯಾವಾಗಲೂ ಅಸಡ್ಡೆ. ಬರತ್ತೆ ಯಾಕಪ್ಪ ಹೇಳ್ಬೇಕು ಅಂತ. ಯಾರಿಗೆ ಬಯ್ಯೋದು ಅಂತ ತಿಳಿಯದ ಪರಿಸ್ಥಿತಿ.

    ಧನ್ಯವಾದ ಸತೀಶ್.

    ReplyDelete

Thanks