Total Pageviews

Wednesday, 20 February 2013

ಮತ್ತೆ ಮರುಗದಿರು..



ಚಿಂತೆ ಮಾಡುವುದೇಕೆ
ಇಲ್ಲದುದರ ಬಗ್ಗೆ
ಸಿಕ್ಕಿರುವುದರ ಬಗೆಗೆ
ಯೋಚಿಸಿಯೇ ಹೆಮ್ಮೆಪಡು
ಇದ್ದುದನು ಅನುಭವಿಸಿ
ಸುಖಿಯಗಿರು ಗೆಲುವಾಗಿರು..

ಬಯಸಿ ಮರುಗಿದರೆ
ಕೊರಗುವುದು ನಿನ್ನ ಜೀವ 

ನಿನಗಿರುವ ಸವಿಸಮಯ
ವ್ಯರ್ಥವಾಗುವುದು
ಹುಂಬ ಗೊಂದಲಗಳಲಿ.

ದಿನಗಳು ಉರುಳುವವು
ಸದ್ದಾಗದಂತೆ
ಸುಳಿವಿಲ್ಲದೆ ಸರಿದಿವೆ
ತಾ ಕಾರಣಗಳ ಮರೆತಂತೆ!!
ಇದ್ದು ಬಿಡು ಓ ಮನಸೇ..
ನಿನ್ನ ಪಾಡಿಗೆ ನೀನು
ನನ್ನ ಹೃದಯಕೆ ತಿಳಿಯದಂತೆ.
ಕಳಿಸದಿರು ಭಾವಗಳ
ಅದು ನೊಂದು ಅಳುವಂತೆ
.
              --ಮೌನ ವೀಣೆ

11 comments:

  1. ಹುಂಬ ಗೊಂದಲಗಳಲಿ.
    ವಾವ್...ಹುಂಬರು ಎನ್ನುವ ಪದದ ಬಳಕೆ ಇಷ್ಟವಾಯ್ತು :)

    ReplyDelete
  2. ಅಲ್ಲವೇ ಮತ್ತೆ. ಸಣ್ಣ ಚಿಂತೆಯಾದರೂ, ನೋವಾದರೂ ನಾವು ಸ್ವಮರುಕ ಪಡುವುದೇ ಹೆಚ್ಚು. ಹಾಗೆ ನೋಡಿದರೆ ಕೆಲವೊಮ್ಮೆ ಅದು ಅಷ್ಟು ತಲೆಗೆ ಹಚ್ಚಿಕೊಳ್ಳುವಂಥಹ ಸಮಸ್ಯೆಯೇ ಆಗಿರುವುದಿಲ್ಲ. ಇಂಥ ಮನಸ್ಥಿತಿಯವರನ್ನ ಹುಂಬರೆಂದೇ ಕರೆಯುವುದಲ್ಲವೇ?

    ವಿಮರ್ಷಿಸಿದ್ದಕ್ಕೆ ಧನ್ಯವಾದಗಳು ಚಿನ್ಮಯ..

    ReplyDelete

Thanks