ನಿನ್ನ ಪ್ರೀತಿಯ ಹಕ್ಕಿ
ಎನ್ನ ಜೀವದೊಳಹೊಕ್ಕಿ
ತೆರೆಸಿತಲ್ಲವೋ ಇನಿಯ
ನನ್ನಾಸೆಗಳೆಲ್ಲವ ಕುಕ್ಕಿ
ನಿನ್ನ ಹೃದಯದ ಪುಟಕೆ
ಮನದ ಭಾವನೆ ಬೆರೆಸಿ
ಬರೆದೆ ಒಲುಮೆಯ ಕವನ
ನಿನ್ನ ಒಲವನು ಬಯಸಿ
ಮಾತು ಮೌನವಾಗುವ ತನಕ
ಹೃದಯ ಬಡಿತ ನಿಲ್ಲುವತನಕ
ಈ ಜೀವ ಮಣ್ಣಿಗೆ ಸೇರುವ ತನಕ
ಕೊಡಲಿ ಗೆಳೆಯ ನಿನ್ನ ಪ್ರೀತಿ
ನನ್ನ ಮನದಲಿ ಪುಳಕ..
-- ಮೌನವೀಣೆ
ಎಂತ ಒಲುಮೆ ಇದು, ಜನ್ಮ ಜನ್ಮಾಂತರದ ಬೆಸುಗೆ ಇದು
ReplyDeleteಪ್ರೀತಿನೆ ಹಾಗೆ ಜೊತೆಗಿದ್ದರು ಸಿಗದೆ... ನೆನಪಾಗಿ ಕಾಡಿಹದು, ಮನದ ಮೂಲೆಯೊಂದರ ವೀಣೆಯಲ್ಲಿ.....
ReplyDeleteಆ ವೀಣೆ ನುಡಿದಾಗ ಪ್ರೀತಿ ನೆನಪಾಗಿ ಹರಿಯುವುದು....ಮನದಲ್ಲಿ ನೋವು ಕಾಡಿಹದು,
ಪ್ರೀತಿ ಒಂದು ರೀತಿ ನೆನಪಿದಂತೆ....!