Total Pageviews

30279

Sunday, 1 December 2013

ಪ್ರೀತಿ ಹಕ್ಕಿ



ನಿನ್ನ ಪ್ರೀತಿಯ ಹಕ್ಕಿ 
ಎನ್ನ ಜೀವದೊಳಹೊಕ್ಕಿ 
ತೆರೆಸಿತಲ್ಲವೋ ಇನಿಯ 
ನನ್ನಾಸೆಗಳೆಲ್ಲವ ಕುಕ್ಕಿ 

ನಿನ್ನ ಹೃದಯದ ಪುಟಕೆ 
ಮನದ ಭಾವನೆ ಬೆರೆಸಿ 
ಬರೆದೆ ಒಲುಮೆಯ ಕವನ 
ನಿನ್ನ ಒಲವನು ಬಯಸಿ 

ಮಾತು ಮೌನವಾಗುವ ತನಕ
ಹೃದಯ ಬಡಿತ ನಿಲ್ಲುವತನಕ 
ಈ ಜೀವ ಮಣ್ಣಿಗೆ ಸೇರುವ ತನಕ 
ಕೊಡಲಿ ಗೆಳೆಯ ನಿನ್ನ ಪ್ರೀತಿ 
ನನ್ನ ಮನದಲಿ ಪುಳಕ..
         -- ಮೌನವೀಣೆ

2 comments:

  1. ಎಂತ ಒಲುಮೆ ಇದು, ಜನ್ಮ ಜನ್ಮಾಂತರದ ಬೆಸುಗೆ ಇದು

    ReplyDelete
  2. ಪ್ರೀತಿನೆ ಹಾಗೆ ಜೊತೆಗಿದ್ದರು ಸಿಗದೆ... ನೆನಪಾಗಿ ಕಾಡಿಹದು, ಮನದ ಮೂಲೆಯೊಂದರ ವೀಣೆಯಲ್ಲಿ.....
    ಆ ವೀಣೆ ನುಡಿದಾಗ ಪ್ರೀತಿ ನೆನಪಾಗಿ ಹರಿಯುವುದು....ಮನದಲ್ಲಿ ನೋವು ಕಾಡಿಹದು,
    ಪ್ರೀತಿ ಒಂದು ರೀತಿ ನೆನಪಿದಂತೆ....!

    ReplyDelete

Thanks