Total Pageviews

Showing posts with label ಹೃದಯ. Show all posts
Showing posts with label ಹೃದಯ. Show all posts

Thursday, 24 April 2014

ಭಾವುಕತೆ


ನನ್ನೊಲವು ನನ್ನಿನಿಯ 
ನೆನೆಸಿಕೊಳ್ಳಲೇ ಸೊಗಸು 
ಕೈ ಮಾಡಿ ಕರೆವಾಸೆ 
ಮನಸೊಳಗೆ ಕನಸೊಳಗೆ 
ಪ್ರತಿ ಕ್ಷಣವೂ ಎಡಬಿಡದೆ.. 

ಪ್ರೀತಿ ಹಾಡಿನ ಕವನ 
ಮಧುರ ಮೋಡಿಯ 
ಯುಗಳ ಗೀತೆ 
ಇಳಿದಾಗ ಎದೆಯೊಳಗೆ 
ಹೇಳತೀರದ ವಿರಹ 
ನಿಮಿಷದೊಳಗೆ.. 

ನಿಜಹೇಳುತಿದೆ ಅಂತರ್ಯ 
ಮಾರುಹೋದೆಯೆ ನೀನು 
ಭಾವಪರವಶೆಯಲ್ಲಿ ಲೀನವಾಗಿ;
ತೀರಲಾರದ ಆಸೆ 
ಮೂಕ ಹೃದಯದ ಭಾಷೆ
ಹೆಪ್ಪುಗಟ್ಟಿವೆ ಭಾವಗಳು 
ಮೋಹದೊಳಗೆ.. 

              -- ಮೌನವೀಣೆ

Wednesday, 30 October 2013

ಬೇಸರ




ಏಕೋ ಏನೋ ಮನಕೆ 
ಇಂದು ಗಾಯವಾಗಿದೆ 
ತೆರೆದು ನೋಡಲು 
ನನ್ನ ಹೃದಯ ಮಾಯವಾಗಿದೆ

ನಿನ್ನ ಪ್ರೀತಿ ಪಡೆದ ಜೀವ 
ಮುನಿಸ ತೋರಿದೆ 
ನಿನ್ನ ಸನಿಹ ಬೇಕು ಎಂದು 
ನನ್ನ ಕಾಡಿದೆ 

ಎಂದು ಬರುವೆ ಏನ ತರುವೆ 
ನನಗೆ ಹೇಳದೆ 
ಅಪ್ಪಿ ಬಿಟ್ಟು ಪಪ್ಪಿ ಕೊಡುವೆ       
ಮಾತೇ ಆಡದೆ
     
       -- ಮೌನವೀಣೆ

Thursday, 19 September 2013

ನನಗೆ ಪ್ರೀತಿಯಾಗಿದೆ!!!


ಮನಕೆ ಕಚಗುಳಿಯಾಗಿದೆ 
ಪ್ರಾಣಪಕ್ಷಿಯು ಕೂಗಿದೆ
ಒಲವ ಕನಸದು ಕಾದಿದೆ 
ಹೃದಯ ಪಲ್ಲವಿ ಹಾಡಿದೆ 
ಅಪರೂಪದ ಸಂಭ್ರಮ ತುಂಬಿದೆ 
ಸ್ವಾರ್ಥ ಗೋಪುರ ಕಳಚಿದೆ
ಮೌನ ಮಾತುಗಳಾಡಿದೆ 
ಗಗನ ಭೂಮಿಗೆ ಜಾರಿದೆ 
ಏನು ಕಾರಣ ಕೇಳಿದೆ?? 
ನಾಚಿ ಹೇಳಿದೆ ನಾನು..
ಅಂತೂ ಇಂತೂ ನನಗೆ 
ಪ್ರೀತಿಯಾಗಿದೆ!!

     --ಮೌನವೀಣೆ

Thursday, 25 July 2013

ಮನಸು ತುಂಬಿದೆ



ಮನತುಂಬ ಸವಿಗನಸು
ಎದೆತುಂಬ ಭಾವೋನ್ಮಾದ
ಹೊಸದೆನಿಸಿದೆ ಈ ಜಗವು
ಬಣ್ಣವಾಗುತಿದೆ ಬದುಕು
ಸೊಗಸೆನಿತಿಸುದೆ ಈ ಭೂಮಿ
ಆಪ್ತವೆನಿಸಿವೆ ಸಂಬಂಧಗಳು
ಅನಿಸುತಿದೆ ಬದಲಾವಣೆ
ನನ್ನ ತುಂಬಾ......

ಜೊತೆಗಾರನ ಬಾಂಧವ್ಯ
ಅಭಿಮಾನದಕ್ಕರೆಗಳು
ವಾತ್ಸಲ್ಯದಾಳದ ಮಮತೆ
ಕಣ್ಣು ತುಂಬುವ ಪ್ರೇಮ
ಒಟ್ಟಾಗಿ ಕಟ್ಟಿಕೊಟ್ಟಿವೆ
ನೂರ್ಮಡಿಸುವ 

ಗಗನ ಚುಂಬಿಸುವ
ಚೈತನ್ಯ ನನ್ನ ತುಂಬಾ......

ಸತ್ಯ-ಮಿಥ್ಯಗಳ
ಹಿರಿಮೆ-ಅರಿವಿನ ಗೋಜು
ಜಗದಳಲ ಗೊಂದಲಗಳು
ಬೇಡವೆಂದಿದೆ ಅಂತರ್ಯ
ಮರೆತಿರುವೆನೇ ನಾನು
ಜಗದ ಪರಿವ??!!
ಒಲವ ಕಾರ್ಮೋಡ ಕವಿದಿದೆ
ಈಗ ನನ್ನ ತುಂಬಾ......

ಹೃದಯದಲಿ ಪ್ರೀತಿ ಗುಪ್ತಗಾಮಿನಿಯಂತೆ
ಕನವರಿಸುತಲಿ ಹರಿಯುತಿದೆ.
ಬಾನ ಚಂದ್ರನ ಬೇಟಿಗೆ
ಮುಸ್ಸಂಜೆಯಲಿ ಕಡಲು ಹದವಾಗಿ ನಲಿದಂತೆ
ತಲ್ಲಣಿಸಿ ಕಾತರಿಸಿ..
ಅವನು ಬರುವಾ ಹೊತ್ತು
ಹೆಸರಿಲ್ಲದ ಪುಳಕಗಳು
ನನ್ನ ತುಂಬಾ......

Wednesday, 20 February 2013

ಮತ್ತೆ ಮರುಗದಿರು..



ಚಿಂತೆ ಮಾಡುವುದೇಕೆ
ಇಲ್ಲದುದರ ಬಗ್ಗೆ
ಸಿಕ್ಕಿರುವುದರ ಬಗೆಗೆ
ಯೋಚಿಸಿಯೇ ಹೆಮ್ಮೆಪಡು
ಇದ್ದುದನು ಅನುಭವಿಸಿ
ಸುಖಿಯಗಿರು ಗೆಲುವಾಗಿರು..

ಬಯಸಿ ಮರುಗಿದರೆ
ಕೊರಗುವುದು ನಿನ್ನ ಜೀವ 

ನಿನಗಿರುವ ಸವಿಸಮಯ
ವ್ಯರ್ಥವಾಗುವುದು
ಹುಂಬ ಗೊಂದಲಗಳಲಿ.

ದಿನಗಳು ಉರುಳುವವು
ಸದ್ದಾಗದಂತೆ
ಸುಳಿವಿಲ್ಲದೆ ಸರಿದಿವೆ
ತಾ ಕಾರಣಗಳ ಮರೆತಂತೆ!!
ಇದ್ದು ಬಿಡು ಓ ಮನಸೇ..
ನಿನ್ನ ಪಾಡಿಗೆ ನೀನು
ನನ್ನ ಹೃದಯಕೆ ತಿಳಿಯದಂತೆ.
ಕಳಿಸದಿರು ಭಾವಗಳ
ಅದು ನೊಂದು ಅಳುವಂತೆ
.
              --ಮೌನ ವೀಣೆ

Wednesday, 26 December 2012

ಅನಿಸುತಿದೆ..

ಇಬ್ಬನಿಯಲಿ ನಾ ತೊಯ್ದು 
ನನ್ನ ಹೃದಯ ಮೃದುವಾಯ್ತು 
ನಿನ್ನ ನೆನಪಿನ ಗರಿಕೆ 
ಕ್ಷಣದಲ್ಲೇ ಹಸಿರಾಯ್ತು 
ನನ್ನೊಡಲಿನ  ಪ್ರೀತಿ 
ಮೊಗ್ಗರಳಿ ಹೂವಾಯ್ತು 
ಇಂತಿರಲು ನಾ ಕಂಡದ್ದು 
ಕನಸೆಂದು ನೋವಾಯ್ತು..

ಬೆಳದಿಂಗಳ ರಾತ್ರಿಯಲಿ 
ನಗುಮೊಗದ ಸರದಾರ 
ಬಾನ  ಚಂದ್ರನು ತಾನು 
ರೋಹಿಣಿ ಬಳಗವ ಕೂಡಿ 
ಮಧುಚಂದ್ರಕೆ ಹೊರಟಂತೆ 
ನೀ ಜೊತೆಗೆ ಇರದಿರಲು 
ನನ್ನ ನೋಡಿ ನಕ್ಕಂತೆ 
ಮೌನ ಗೌರಿಯ ಹಾಗೆ 
ನಾನೊಂಟಿ  ವನದಲ್ಲಿ.

ಅಲೆವ ಮನದೊಳಗಿಂದು 
ಜಿಗಿವ ಆಸೆಯ ಕಂತೆ 
ಸೋತ ಕಂಗಳವಳಗೆ
ನೂರು ಮಾತಿರುವಂತೆ 
ನೀನು ಎಲ್ಲಿಹೆಯೆಂದು 
ಮನವ ಕಾಡಿದೆ ಚಿಂತೆ
ಜೀವ ನಿನ್ನಾಸರೆಯ  
ಕಾಯುತಿಹುದು .....
            -- ಮೌನ ವೀಣೆ